Mysore
16
few clouds

Social Media

ಶುಕ್ರವಾರ, 30 ಜನವರಿ 2026
Light
Dark

ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಅನುದಾನ ಪರಿಶೀಲನೆ : ಕೇಂದ್ರದ ಸಚಿವೆ ನಿರ್ಮಲಾ ಸೀತಾರಾಮನ್

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಅದರಲ್ಲೂ ಮಾನವ ಸೂಚ್ಯಂಕ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರದಿಂದ ವಿಶೇಷ ಅನುದಾನ ಕಲ್ಪಿಸುವುದನ್ನು ಪರಿಶೀಲನೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಚುನಾವಣಾ ಪ್ರಚಾರದಂಗವಾಗಿ ಇಲ್ಲಿಗೆ ಆಗಮಿಸದ ಅವರು ಬಿಜೆಪಿ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಕ ಭಾಗಕ್ಕೆ ಜಾರಿಯಾಗಿರುವ 371 ಜೆ ವಿಧಿ ಅಡಿ ರಾಜ್ಯ ಸರ್ಕಾರ ಕೆಕೆಆರ್ ಡಿಬಿ ಗೆ ವಿಶೇಷ ಅನುದಾನ ನೀಡುವಂತೆ ಕೇಂದ್ರದಿಂದಲೂ ಕೊಡುವ ಬಗ್ಗೆ ಪತ್ರಕರ್ತರು ನೀಡಿರುವ ಸಲಹೆ ಕೇಂದ್ರದ ವರಿಷ್ಠ ರ ಗಮನಕ್ಕೆ ತಂದು ಕಾರ್ಯಾನುಷ್ಢಾನ ನಿಟ್ಟಿನಲ್ಲಿ ಪರಿಶೀಲಿಸುವುದಾಗಿ ತಿಳಿಸಿದರು.

ದೇಶದಲ್ಲಿ 116 ಹಿಂದುಳಿದ ಜಿಲ್ಲೆಗಳೆಂದು ಗುರುತಿಸಿ ಸರ್ವಾಂಗೀಣ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ರೂಪಿಸಿದೆ. ಈ ಕಾರ್ಯ ಪ್ರಧಾನಮಂತ್ರಿ ಗಳ ನೇತೃತ್ವದಲ್ಲಿ ಯೇ ನಡೆಯುತ್ತಿದ್ದು, ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಯುತ್ತಿದೆ. ಖುದ್ದಾಗಿ ಪ್ರಧಾನಿ ಅವರೇ ನಿಗಾ ವಹಿಸುವುದರಿಂದ ಎಲ್ಲ ಕಾರ್ಯಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ ಎಂದು ಸಚಿವ ನಿರ್ಮಲಾ ಸೀತಾರಾಮನ್ ವಿವರಿಸಿದರು.

ಬೇಳೆ ಉತ್ಪಾದನಾ ಹೆಚ್ಚಳಕ್ಕೆ ಆದ್ಯತೆ : ದೇಶದಲ್ಲಿ ಅವಶ್ಯಕ ತಕ್ಕಂತೆ ಬೇಳೆ ಕಾಳುಗಳ ಉತ್ಪಾದನೆ ಯಾಗುತ್ತಿಲ್ಲ.‌ ಹೀಗಾಗಿ ಕೊರತೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಬೇಳೆ ಕಾಳುಗಳ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ಧನ ನೀಡುವುದು, ಬೆಂಬಲ ಬೆಲೆ ಹೆಚ್ಚಿಸುವುದು ಸೇರಿದಂತೆ ಇತರ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ.‌ ಕಲಬುರಗಿ ತೊಗರಿ ದೇಶದಲ್ಲೇ ಗುಣಮಟ್ಟತೆಯಿಂದ ಕೂಡಿದೆ.‌ ತೊಗರಿಗೂ ಉತ್ತೇಜನ ನೀಡಲಾಗುತ್ತಿದೆ. ಪ್ರೋತ್ಸಾಹ ನೀಡಲು ಈಗಾಗಲೇ ಚಾಲನೆ ನೀಡಲಾಗಿದೆ‌ ಎಂದರು.‌

ರಾಯಚೂರು ಕೃಷಿ ವಿವಿಯೊಂದಿಗೆ ಈ ಭಾಗದಲ್ಲಿ ಸಿರಿಧಾನ್ಯ ಹೆಚ್ಚಿಸಲು ಕಾರ್ಯಕ್ರಮ ರೂಪಿಸಲಾಗಿದೆ.‌ ಸಿರಿಧಾನ್ಯ ಪ್ರೋತ್ಸಾಹ ಧನದ ಜತೆಗೆ ಸಣ್ಣ- ಸಣ್ಣ ಸ್ಟಾರ್ಟಪ್ ಉದ್ಯಮಗಳಿಗೂ ಕೋಟಿಗಟ್ಟಲೇ ಸಬ್ಸಿಡಿ ನೀಡಲಾಗುತ್ತಿದೆ. ಹೀಗಾಗಿ ಈ ಭಾಗದ ರೈತರು ಹಾಗೂ ಉದ್ಯಮಿದಾರರಿಗೆ ಸೂಕ್ತ ವಾತಾವರಣ ಕಲ್ಪಿಸಿದಂತಾಗಿದೆ ಎಂದು ಕೇಂದ್ರದ ಸಚಿವರು ವಿವರಿಸಿದರು.

ಯಡಿಯೂರಪ್ಪಗೆ ಉನ್ನತ ಸ್ಥಾನ: ಕಾಂಗ್ರೆಸ್ ಪಕ್ಷ ವೀರೇಂದ್ರ ಪಾಟೀಲ್ ಅವರನ್ನು ರಾತೋ ರಾತ್ರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಿ ಲಿಂಗಾಯತ ರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಪಕ್ಷ ಲಿಂಗಾಯತ ರನ್ನು ಕಡೆಗಣಿಸುತ್ತಾ ಬಂದಿದೆ.‌ ಆದರೆ ತಾವು ಮಾಜಿ ಮುಖ್ಯಮಂತ್ರಿ ಬಿ.ಎಸ್.‌ಯಡಿಯೂರಪ್ಪ ಅವರನ್ನು ಕಡೆಗಣಿಸಿಲ್ಲ.‌ ಸೂಕ್ತಸ್ಥಾನಮಾನ ಕಲ್ಪಿಸಲಾಗಿದೆ.‌ಅವರು ಪಕ್ಷದ ನಾಯಕರು. ಪಕ್ಷದ ಸಂಘಟನೆಗಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ ಎಂದರು.

ಬಿಜೆಪಿ ಪ್ರಮುಖರಾದ ಶಶಿಕಲಾ ಟೆಂಗಳಿ, ಚಂದಮ್ಮ ಪಾಟೀಲ್, ಬಿಜೆಪಿ‌ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷ ಭಾಗೀರಥಿ ಗುನ್ನಾಪುರ, ಬಿಜೆಪಿ ನಗರಾದ್ಯಕ್ಷ ಸಿದ್ದಾಜಿ ಪಾಟೀಲ್ ಸೇರಿದಂತೆ ಮುಂತಾದವರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!