Mysore
26
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಸಿದ್ದರಾಮಯ್ಯ ಸೋಲಿಗೆ ಪೊಲೀಸರ ಸಂಕಲ್ಪ? : ಕರ್ನಾಟಕ ಪೊಲೀಸ್ ಮಹಾಸಂಘದಿಂದ ಅಚ್ಚರಿ ಪ್ರಕಟಣೆ

ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಿಗಾಗಿ ಕರ್ನಾಟಕ ಪೊಲೀಸ್ ಸಿಬ್ಬಂದಿಗಳು,ಕುಟುಂಬ ವರ್ಗ ಸಂಕಲ್ಪ ತೊಟ್ಟಿದೆಯಂತೆ.ಇಂತಹ ಸಂದೇಶವಿರುವ ಪತ್ರಿಕಾ ಪ್ರಕಟಣೆ ಕರ್ನಾಟಕ ಪೊಲೀಸ್ ಮಹಾಸಂಘ ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.ಅಧ್ಯಕ್ಷ ಶಶಿಧರ್ ಸಹಿ ಇರುವ ಪ್ರಕಟಣೆ ರವಾನೆಯಾಗಿದೆ.ಪೊಲೀಸರ ವಿರೋಧಿ ನೀತಿಯನ್ನ ಅನುಸರಿಸಿರುವ ಸಿದ್ದರಾಮಯ್ಯ ರನ್ನ ಸೋಲಿಸುವುದಾಗಿ ಪಣತೊಟ್ಟಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2016 ರಲ್ಲಿ ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಪೊಲೀಸರು ಹೋರಾಟಕ್ಕೆ ಇಳಿದಿದ್ದರು.ಇದರ ಮುಂಚೂಣಿಯನ್ನ ಶಶಿಧರ್ ವಹಿಸಿದ್ದರು.ಹೋರಾಟ ಹತ್ತಿಕ್ಕಲು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರೆಸಿ 84 ದಿನಗಳ ಕಾಲ ಜೈಲಿಗೆ ಕಳಿಸಿದ್ದ ಬಗ್ಗೆ ಉಲ್ಲೇಖಿಸಿರುವ ಶಶಿಧರ್ ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋಲನುಭವಿಸಿದಂತೆ ಈ ಬಾರಿಯೂ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲನುಭವಿಸುತ್ತಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲಿಗೆ ಪೊಲೀಸರ ಪಾತ್ರ ಮಹತ್ತರವಾಗಿದೆ ಎಂದೂ ಸಹ ಉಲ್ಲೇಖವಾಗಿದೆ.

ಏ 18,2023 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಮಂತ್ರಿ ಪರಮೇಶ್ವರ್ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅಭಿಯೋಜಕ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ರೋಚಕತೆ ಪಡೆಯಲಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!