ಮಳವಳ್ಳಿ : ಸರಗೂರು ಸಮೀಪ ಕಾರು ಸ್ಕೂಟರ್ ಮುಖಾ ಮುಖಾ ಡಿಕ್ಕಿ ಹೊಡೆದು ಸ್ಥಳದಲ್ಕೆ ಬೈಕ್ ಸವಾರ ಸಾವನಪ್ಪಿದ್ದು, ಮತ್ತೋಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ಜರುಗಿದೆ.
ತಾಲೂಕಿನ ಕಂಚುಗಹಳ್ಳಿ ಗ್ರಾಮದ ಶಿವಪ್ಪ 65 ವರ್ಷ ಹಾಗೂ ಸತೀಶ್ 48 ವರ್ಷ,ಇಬ್ಬರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.
ಅಪಘಾತದ ರಭಸಕ್ಕೆ ಬೈಕ್ ಹತ್ತಿಕೊಂಡು ಉರಿದಿದೆ .ಕಂಚು ಗಹಳ್ಳಿ ಗ್ರಾಮದಿಂದ ಬೈಕ್ ನಲ್ಲಿ ಮದುವೆಗೆಂದು ಪೂರಿಗಾಲಿ ಗ್ರಾಮಕ್ಕೆ ಹೋಗಿ ಬರುತ್ತಿದ್ದಾಗ ಸರಗೂರು ಗ್ರಾಮದ ಬಳಿ ಎದುರುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.