Mysore
23
overcast clouds

Social Media

ಬುಧವಾರ, 17 ಜೂನ್ 2026
Light
Dark

ನಟನದಲ್ಲಿ ‘ಮುದಿ ದೊರೆ ಮತ್ತು ಮೂವರು ಮಕ್ಕಳು’ ನಾಟಕ

ಮೈಸೂರು: ಇಲ್ಲಿನ ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಏಪ್ರಿಲ್ 22ರಂದು ಸಂಜೆ 6.30 ಗಂಟೆಗೆ ‘ಮುದಿ ದೊರೆ ಮತ್ತು ಮೂವರು ಮಕ್ಕಳು’ ನಾಟಕ ಪ್ರದರ್ಶನವಿದೆ.

ಬೆಂಗಳೂರಿನ ಕಲಾಗಂಗೋತ್ರಿ ಅಭಿನಯಿಸುವ ಹೊಸ ನಾಟಕವಿದು. ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ರಚನೆಯ ಈ ನಾಟಕವನ್ನು ಮಂಗಳಾ ಎನ್. ನಿರ್ದೇಶಿಸಿದ್ದಾರೆ.

ಷೇಕ್ಸ್‌ಪಿಯರ್ ನ ‘ಕಿಂಗ್ ಲಿಯರ್’ ನಾಟಕ ಆಧರಿಸಿ ಎಚ್.ಎಸ್.ವೆಂಕಟೇಶ ಮೂರ್ತಿ ಈ ನಾಟಕ ರಚಿಸಿದ್ದಾರೆ. ಕಲಾಗಂಗೋತ್ರಿ ತಂಡದ 80 ವರ್ಷ ವಯಸ್ಸಿನ ಶ್ರೀನಿವಾಸ್ ಮೇಷ್ಟ್ರು ಈ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನುವುದು ವಿಶೇಷ.

ಕಲಾಗಂಗೋತ್ರಿಗೆ 50 ವರ್ಷವಾದ ಪ್ರಯುಕ್ತ ಸುವರ್ಣ ಸಂಭ್ರಮವೆಂದು ಈ ನಾಟಕ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಕಲಾಗಂಗೋತ್ರಿಯ ಸಂಚಾಲಕರಾದ ಡಾ.ಬಿ.ವಿ.ರಾಜಾರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!