Mysore
23
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಪ್ರಿಯಾಂಕ್ ಖರ್ಗೆ ₹ 10.29 ಕೋಟಿ ಆಸ್ತಿ ಒಡೆಯ

ಕಲಬುರಗಿ : ಚಿತ್ತಾಪುರ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಸೋಮವಾರ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರ ಆಸ್ತಿ ₹ 10.29 ಕೋಟಿ ಇದೆ. ಅವರ ಪತ್ನಿ ಶ್ರುತಿ ಖರ್ಗೆ ಅವರ ಹೆಸರಿನಲ್ಲಿ ₹ 72.38 ಲಕ್ಷದ ಆಸ್ತಿ ಇದೆ.

ಜಂಟಿಯಾಗಿ ₹ 96.96 ಲಕ್ಷ ಮೌಲ್ಯದ ಆಸ್ತಿಗಳಿವೆ. ಪುತ್ರ ಅಮಿತಾವ್ ಹೆಸರಿನಲ್ಲಿ ₹ 25.39 ಲಕ್ಷ, ಕಿರಿಯ ಪುತ್ರ ಅಕಾಂಕ್ಷ್ ಹೆಸರಿನಲ್ಲಿ ₹ 4.52 ಲಕ್ಷದ ಆಸ್ತಿಗಳಿವೆ.

ಪ್ರಿಯಾಂಕ್ ಅವರು ಗ್ರಾವಿಟಾಸ್ ಎಸ್ಟೇಟ್ಸ್‌, ಗ್ರಾವಿಟಾಸ್ ಇನ್ವೆಸ್ಟ್‌ಮೆಂಟ್ಸ್, ಟ್ರಿಪಲ್ ಜೆಮ್ ಪಾಲಿಪ್ಯಾಕ್ಸ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಯುಟಿಐ ಸಂಸ್ಥೆಯ ಉಳಿತಾಯ ಯೋಜನೆಯಲ್ಲಿ ಹಣ ತೊಡಗಿಸಿದ್ದಾರೆ. 2016ರಲ್ಲಿ ಹೋಂಡಾ ಸಿಆರ್‌ವಿ ಕಾರನ್ನು ಖರೀದಿ ಮಾಡಿದ್ದು, ಇದರ ಮೌಲ್ಯ ₹ 29.52 ಲಕ್ಷ. ₹ 32.50 ಲಕ್ಷ ಮೌಲ್ಯದ 650 ಗ್ರಾಂ ಚಿನ್ನವನ್ನು ಹೊಂದಿದ್ದಾರೆ. ಥೌಟ್ ಕ್ಲೌಡ್ ಸ್ಟುಡಿಯೊ ಎಲ್‌ಎಲ್‌ಪಿಯಲ್ಲಿ ₹ 1.06 ಕೋಟಿ ಮೌಲ್ಯದ ಮೂಲ ಬಂಡವಾಳ ಹೂಡಿಕೆ ಮಾಡಿದ್ದಾರೆ.

ಬೆಂಗಳೂರಿನ ಆರ್‌.ಟಿ. ನಗರದಲ್ಲಿ ₹ 1.67 ಕೋಟಿ ಮೌಲ್ಯದ ಕಟ್ಟಡವಿದೆ. ಅರಮನೆ ರಸ್ತೆಯಲ್ಲಿ ₹ 1.02 ಕೋಟಿ ಮೌಲ್ಯದ ವಾಣಿಜ್ಯ ಮಳಿಗೆ ಇದೆ. ಕೆ.ಆರ್. ಪುರಂ ಹೋಬಳಿಯ ರಾಚೇನಹಳ್ಳಿಯಲ್ಲಿ ₹ 2.44 ಕೋಟಿ ಮೌಲ್ಯದ ಆಸ್ತಿ ಇದೆ. ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿಯಲ್ಲಿ ₹ 1.34 ಕೋಟಿ ಮೌಲ್ಯದ 46.28 ಎಕರೆ ಜಮೀನಿದೆ.

ಮಾನ ಹಾನಿ, ಮುಖ್ಯಮಂತ್ರಿಗಳ ಮನೆ ಎದುರು ಪ್ರತಿಭಟನೆ, ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ನಡೆಸಿದ ಆರೋಪದ ಮೇರೆಗೆ ಬೆಂಗಳೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ