Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಲಕ್ಷ್ಮೀ ಅರುಣ ನಾಮಪತ್ರ ಸಲ್ಲಿಕೆ : ಜನಾರ್ದನ ರೆಡ್ಡಿ ದಂಪತಿ ಆಸ್ತಿ ಎಷ್ಟು ಗೊತ್ತಾ?

ಬಳ್ಳಾರಿ : ಗಣಿ ಧಣಿ ಜನಾರ್ದನ ರೆಡ್ಡಿ ಪತ್ನಿ ಜಿ ಲಕ್ಷ್ಮೀ ಅರುಣ ಬಳ್ಳಾರಿ ನಗರ ಕ್ಷೇತ್ರದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ತಮ್ಮ ಬಳಿ 96.23 ಕೋಟಿ ರೂ. ಚರಾಸ್ತಿ, 104.38 ಕೋಟಿ ರೂ. ಸ್ಥಿರಾಸ್ತಿ ಸೇರಿ ಒಟ್ಟು 200.61 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿದ್ದಾರೆ. ಪತಿ ಬಳಿ 29.20 ಕೋಟಿ ರೂ. ಚರಾಸ್ತಿ, 8 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 37.20 ಕೋಟಿ ರೂ. ಆಸ್ತಿ ಹಾಗೂ ಪುತ್ರ ಕಿರೀಟಿ ರೆಡ್ಡಿ ಬಳಿ 7.24 ಕೋಟಿ ರೂ. ಚರಾಸ್ತಿ ಇದೆ ಎಂದು ಘೋಷಿಸಿದ್ದಾರೆ.

ಹೀಗೆ ಒಟ್ಟು ತಮ್ಮ ಕುಟುಂಬದ ಬಳಿ 245.05 ಕೋಟಿ ರೂ. ಮೊತ್ತದ ಆಸ್ತಿ ಇರುವುದಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಜಿ. ಲಕ್ಷ್ಮೀ ಅರುಣ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.ಜಿ ಲಕ್ಷ್ಮೀ ಅರುಣ ಅವರು ತಮ್ಮ ಕೈಯಲ್ಲಿ 1.76 ಲಕ್ಷ ಹಣವಿದ್ದು, ಪತಿ ಜನಾರ್ದನ ರೆಡ್ಡಿ ಕೈಯಲ್ಲಿ 1.33 ಲಕ್ಷ ರೂ. ಇದೆ. ಓಬಳಾಪುರಂ ಮೈನಿಂಗ್‌ ಕಂಪನಿಯಲ್ಲಿ 29.55 ಕೋಟಿ ರೂ., ಬ್ರಹ್ಮಣಿ ಇಂಡಸ್ಟ್ರೀಸ್‌ನಲ್ಲಿ 25.08 ಕೋಟಿ ರೂ., ಮುದಿತಾ ಪ್ರಾಪರ್ಟೀಸ್‌ನಲ್ಲಿ 18.27 ಕೋಟಿ ರೂ., ಟುಬ್ಲಾರ್‌ ರಿವಟ್ಸ್‌, ಕಿರೀಟಿ ಏವಿಯೇಷನ್ಸ್‌ನಲ್ಲಿ ತಲಾ 1 ಕೋಟಿ ರೂ., ಒಡಿಸ್ಸಿ ಕಾರ್ಪೊರೇಷನ್‌ನಲ್ಲಿ 3.42 ಕೋಟಿ ರೂ. ಹೂಡಿಕೆ ಇರುವುದಾಗಿ ತಿಳಿಸಿದ್ದಾರೆ. ಇನ್ನೂ ಹಲವು ಕಂಪನಿಗಳಲ್ಲಿ ಅವರು ಒಂದಿಷ್ಟು ಹೂಡಿಕೆ ಹೊಂದಿದ್ದಾರೆ.ಬ್ರಹ್ಮಣಿ ಇಂಡಸ್ಟ್ರೀಸ್‌ನಲ್ ಜನಾರ್ದನ ರೆಡ್ಡಿ 19.58 ಕೋಟಿ ರೂ. ಹೂಡಿಕೆ ಹೊಂದಿದ್ದರೆ, ಕಿರೀಟಿ ಏವಿಯೇಷನ್ಸ್‌ನಲ್ಲಿ 1 ಕೋಟಿ ರೂ. ಹಣ ಹೂಡಿದ್ದಾರೆ.

ರೆಡ್ಡಿ ದಂಪತಿ ಬಳಿ ಇದೆ 84.7 ಕೆಜಿ ಚಿನ್ನ : ರೆಡ್ಡಿ ದಂಪತಿ ಬಳಿ ಅಪಾರ ಪ್ರಮಾಣದ ಚಿನ್ನ ಇರುವುದೂ ಅಫಿಡವಿಟ್‌ನಿಂದ ತಿಳಿದು ಬಂದಿದೆ. ರೆಡ್ಡಿ ಪತ್ನಿ ಬಳಿ 2.58 ಕ್ವಿಂಟಾಲ್‌ ಬೆಳ್ಳಿ ಇದ್ದು, ಇದರ ಮೌಲ್ಯ 77.20 ಲಕ್ಷ ರೂ.ಗಳಾಗಿವೆ. ಇನ್ನು 38.48 ಕೆಜಿ ಚಿನ್ನ-ವಜ್ರವಿದ್ದು ಇದರ ಮೌಲ್ಯ 16.44 ಕೋಟಿ ರೂ.ಗಳಾಗಿವೆ. ರೆಡ್ಡಿ ಬಳಿ 32.18 ಲಕ್ಷ ರೂ. ಮೌಲ್ಯದ 1.78 ಕ್ವಿಂಟಾಲ್‌ ಬೆಳ್ಳಿ ಇದ್ದರೆ, 46.25 ಕೆಜಿ ಚಿನ್ನ-ವಜ್ರ ಇದೆ. ಇದರ ಮೌಲ್ಯ 7.93 ಕೋಟಿ ರೂ. ಆಗಿದೆ. ಹೀಗೆ ತಮ್ಮ ಬಳಿ 96.23 ಕೋಟಿ ರೂ. ಚರಾಸ್ತಿ ಇರುವುದಾಗಿ ಲಕ್ಷ್ಮೀ ಅರುಣ ಘೋಷಿಸಿಕೊಂಡಿದ್ದರೆ, ಪತಿ ಬಳಿ 29.20 ಕೋಟಿ ರೂ. ಚರಾಸ್ತಿ ಇರುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಅವರ ಪುತ್ರ ಕಿರೀಟಿ ರೆಡ್ಡಿ ಬಳಿ 7.24 ಕೋಟಿ ರೂ. ಚರಾಸ್ತಿ ಇದೆ.

ವಿಶೇಷವೆಂದರೆ ಲಕ್ಷ್ಮೀ ಅರುಣ ತಮ್ಮ ಬಳಿಯಲ್ಲಾಗಲಿ, ಪತಿ ಬಳಿಯಲ್ಲಾಗಲಿ ಯಾವುದೇ ವಾಹನಗಳಲ್ಲಿ ಎಂದು ಪ್ರಯಾಣ ಪತ್ರ ಸಲ್ಲಿಸಿದ್ದಾರೆ.ರೆಡ್ಡಿ ದಂಪತಿ ಬಳಿ ಇದೆ 112 ಕಷಿ ಹಾಗೂ ಕೃಷಿಯೇತರ ಭೂಮಿ
ಲಕ್ಷ್ಮೀ ಅರುಣ ಬಳಿ 14 ಕೃಷಿ ಜಮೀನು, 93 ಕೃಷಿಯೇತರ ಭೂಮಿ ರೆಡ್ಡಿ ಬಳಿ 2 ಕೃಷಿ ಭೂಮಿ, 3 ಕೃಷಿಯೇತರ ಭೂಮಿ ಇದೆ. ರೆಡ್ಡಿ ಪತ್ನಿ ಹೆಸರಿನಲ್ಲಿ 4 ವಾಣಿಜ್ಯ ಕಟ್ಟಡಗಳಿದ್ದರೆ, 3 ಮನೆಗಳಿವೆ. ರೆಡ್ಡಿ ಬಳಿ ಒಂದು ಫ್ಲ್ಯಾಟ್‌ ಇದೆ.ಹೀಗೆ ಒಟ್ಟು 104.38 ಕೋಟಿ ರೂ. ಸ್ಥಿರಾಸ್ತಿ ತಮ್ಮ ಹೆಸರಿನಲ್ಲೂ, ಪತಿ ಹೆಸರಲ್ಲಿ 8 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇರುವುದಾಗಿಯೂ ಲಕ್ಷ್ಮೀ ಅರುಣ ತಿಳಿಸಿದ್ದಾರೆ.
ಜಿ ಲಕ್ಷ್ಮೀ ಅರುಣ ಅವರು 2021-22ರಲ್ಲಿ 2.58 ಕೋಟಿ ರೂ. ಆದಾಯ ಘೋಷಿಸಿಕೊಂಡಿದ್ದರೆ, 2022-23ರಲ್ಲಿ 21.11 ಲಕ್ಷ ಆದಾಯ ಇರುವುದಾಗಿ ಹೇಳಿದ್ದಾರೆ. ಅವರ ಪತಿ ಜಿ ಜನಾರ್ದನ ರೆಡ್ಡಿ 2018-19ರಲ್ಲಿ 65.21 ಲಕ್ಷ ರೂ. ಆದಾಯ ಇರುವುದಾಗಿ ತಿಳಿಸಿದ್ದಾರೆ. ನಂತರದ ರಿಟರ್ನ್ಸ್‌ ಅನ್ನು ಅವರಿನ್ನೂ ಫೈಲ್‌ ಮಾಡಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ