ಕೊಡಗು : ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಹಾಗೂ ವಕೀಲ ಕೃಷ್ಣ ಮೂರ್ತಿ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಸಹಾತ್ ಕೃಷ್ಣ ಮೂರ್ತಿ ಪ್ರಾಣಪಾದಿಂದ ಪರಾಗಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ಸಮೀಪ ಚಟ್ಟಳ್ಳಿ ಬಳಿಯ ಅಬ್ಬಿಯಾಲ ಬಳಿ ಈ ಘಟನೆ ಸಂಭವಿಸಿದ್ದು, ಕೃಷ್ಣಮೂರ್ತಿ ಚಟ್ಟಿಳ್ಳಿ ಗ್ರಾಮದಿಂದ ಮಡಿಕೇರಿಗೆ ಬರುತ್ತಿದ್ದ ವೇಳೆ ಕಿಡಿಗೇಡಿಗಳು ಗುಂಡು ಹಾರಿಸಲು ಯತ್ನಿಸಿದ್ದು, ಗುಂಡು ಕಾರಿಗೆ ತಗುಲಿದೆ ಆದ್ದರಿಂದ ಕೃಷ್ಣಮೂರ್ತಿ ಪ್ರಾಣಪಾದಿಂದ ಪರಾಗಿದ್ದಾರೆ. ಇನ್ನು ಸ್ಥಳಕ್ಕೆ ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಣಿತ ಪೋಲಿಸ್ ತಂಡ ಆರೋಪಿಗಳಿಗೆ ಶೋಧಕಾರ್ಯ ನಡೆಸಿದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕೃಷ್ಣ ಮೂರ್ತಿ ಮೇಲೆ ಗುಂಡಿನ ದಾಳಿ





