Mysore
28
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ಮುಂಬೈ| ಭಿನ್ನಾಭಿಪ್ರಾಯ ಲೆಕ್ಕಿಸದೆ ಒಗ್ಗಟ್ಟಿನಿಂದ ಕೆಲಸ ಮಾಡಿ: ಶರದ್ ಪವಾರ್

ಮುಂಬೈ (ಪಿಟಿಐ); ಶಿವಸೇನಾ (ಠಾಕ್ರೆ ಬಣ ) ಮತ್ತು ಮಹಾ ವಿಕಾಸ್ ಅಘಾಡಿ (ಎಂವಿಎ) ಮಿತ್ರಪಕ್ಷಗಳು ಭಿನ್ನಾಭಿಪ್ರಾಯ ಹೊಂದಿದ್ದರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬುಧವಾರ ಹೇಳಿದ್ದಾರೆ.

ಮಂಗಳವಾರ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗಿನ ಸಭೆಯಲ್ಲಿ ಮಿತ್ರಪಕ್ಷಗಳ ನಡುವಿನ ಒಗ್ಗಟ್ಟಿನ ವಿಷಯವನ್ನು ಚರ್ಚಿಸಲಾಗಿದೆ ಎಂದು ಪವಾರ್ ಸುದ್ದಿಗಾರರಿಗೆ ತಿಳಿಸಿದರು.

ಮೈತ್ರಿಕೂಟದ ಏಕತೆಗಾಗಿ ಕೆಲವು ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು. ಇದಕ್ಕೆ ನಾವು ಒಪ್ಪಿಕೊಂಡಿದ್ದೇವೆ ಎಂದರು.

ಅದಾನಿ ಪ್ರಕರಣದಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಬದಲು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಸಮಿತಿಯಿಂದ ತನಿಖೆಗೆ ಎನ್‌ಸಿಪಿ ಮುಖ್ಯಸ್ಥರು ಒಲವು ತೋರಿದ ಕೆಲ ದಿನಗಳ ನಂತರ ಪವಾರ್ ಮತ್ತು ಠಾಕ್ರೆ ನಡುವಿನ ಸಭೆ ನಡೆದಿದೆ.

ಜೆಪಿಸಿ ತನಿಖೆಗೆ ಕಾಂಗ್ರೆಸ್‌, ಶಿವಸೇನಾ ಒತ್ತಾಯಿಸುತ್ತಿವೆ. ವಿರೋಧ ಪಕ್ಷಗಳ ಈ ಬೇಡಿಕೆಗೆ ಎನ್‌ಸಿಪಿಯ ಸಮ್ಮತಿ ಇಲ್ಲದಿದ್ದರೂ ವಿಪಕ್ಷಗಳ ಒಗ್ಗಟ್ಟಿನ ಹಿತದೃಷ್ಟಿಯಿಂದ ಅವರ ನಿಲುವಿನ ವಿರುದ್ಧ ಹೋಗುವುದಿಲ್ಲ ಎಂದು ಶರದ್‌ ಪವಾರ್‌ ತಿಳಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!