Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಅಮೆರಿಕದಲ್ಲಿ ಹರಡುತ್ತಿದೆ ಕ್ಯಾಂಡಿಡಾ ಔರಿಸ್ ಫಂಗಸ್

ಮೋರ್ಗನ್‌ಟೌನ್ : ಅಮೆರಿಕದಾದ್ಯಂತ ಆಸ್ಪತ್ರೆಗಳಲ್ಲಿರುವ ರೋಗಿಗಳು ’ಕ್ಯಾಂಡಿಡಾ ಔರಿಸ್’ ಎಂಬ ಹೆಸರಿನ ಶಿಲೀಂಧ್ರ ಸೋಂಕಿನಿಂದ ಅಲರ್ಜಿಗೆ ತುತ್ತಾಗಿ ಸಾವಿಗೀಡಾಗುತ್ತಿದ್ದಾರೆ. ಈ ಸೋಂಕು ತೀವ್ರವಾಗಿ ಹಬ್ಬುತ್ತಿದ್ದು ಎಚ್ಚರದಿಂದ ಇರಬೇಕೆಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರ ತಿಳಿಸಿದೆ.
ಇತ್ತೀಚೆಗೆ ಪತ್ತೆಯಾದ ಈ ರೋಗಕಾರಕ ಫಂಗಸ್‌ ಪ್ರಮಾಣದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುತ್ತಿದ್ದು ಮುಖ್ಯವಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಅಲರ್ಜಿ ಉಂಟುಮಾಡಿ ಅವರ ಸಾವಿಗೆ ಕಾರಣವಾಗಿರುವುದು, ಅಮೆರಿಕದ ಜನತೆಗೆ ಆತಂಕವನ್ನುಂಟು ಮಾಡಿದೆ.

ಏನಿದು ಕ್ಯಾಂಡಿಡಾ ಔರಿಸ್?: ಇದು ಪ್ರಥಮಬಾರಿಗೆ 2009ರಲ್ಲಿ ಕಂಡುಬಂತು. ಕ್ಯಾಂಡಿಡಾ ಏಕಕೋಶ ಶಿಲೀಂಧ್ರವಾಗಿದ್ದು, 2019ರಿಂದ ಅಮೆರಿಕದಲ್ಲಿ ಈ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳಕಂಡುಬರುತ್ತಿದೆ. ಮನುಷ್ಯನ ಜೀವಕ್ಕೇ ಅಪಾಯ ತಂಡೊಡ್ಡುವ ಕ್ಯಾಂಡಿಡಾ, ಸದ್ಯಕ್ಕಿರುವ ಫಂಗಸ್‌ ನಿರೋಧಕ ಔಷಧಗಳ ವಿರುದ್ಧ ಪ್ರತಿರೋಧಿಸುವ ಸಾಮರ್ಥ್ಯ ಹೊಂದಿದೆ.

ಇದು ಆರೋಗ್ಯವಂತರಿಗೆ ಹೆಚ್ಚಾಗಿ ಬಾಧಿಸದೇ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೇ ಹೆಚ್ಚಾಗಿ ತಗುಲುತ್ತಿದೆ ಎಂದು ರೋಗ ನಿಯಂತ್ರಣ ಕೇಂದ್ರ ತಿಳಿಸಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ