Mysore
30
clear sky

Social Media

ಮಂಗಳವಾರ, 11 ಮಾರ್ಚ್ 2025
Light
Dark

ಹಣ ಸಾಗಿಸಲು ಬಿಜೆಪಿಗೆ ಐಟಿ – ಇ.ಡಿ ರಕ್ಷಣೆ : ದಿನೇಶ್‌ ಗುಂಡೂರಾವ್‌ ಆರೋಪ

ಬೆಂಗಳೂರು : ‘ಬಿಜೆಪಿಯವರು ತಮ್ಮ ಒಬ್ಬೊಬ್ಬ ಅಭ್ಯರ್ಥಿಗೆ ₹ 10 ಕೋಟಿ ಕೊಡುತ್ತಿದ್ದಾರೆ. ಅವರು ಈ ಹಣ ಸಾಗಿಸಲು ಐಟಿ, ಇ.ಡಿ ರಕ್ಷಣೆ ಪಡೆಯುತ್ತಾರೆ’ ಎಂದು ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ಆರೋಪಿಸಿದರು.‌
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಜೆಪಿಯವರು ಪೊಲೀಸ್ ವಾಹನದಲ್ಲೇ ಹಣ ಸಾಗಿಸಬಹುದು’ ಎಂದು ಅವರು ಹೇಳಿದರು.‘ಕಳೆದ ಚುನಾವಣೆ ವೇಳೆ ಯಾರ ಮೇಲೆ ಐಟಿ, ಇಡಿ ದಾಳಿ ನಡೆದಿದೆ ಎನ್ನುವುದನ್ನು ನೋಡಿದ್ದೇವೆ. ಐಟಿ, ಇ.ಡಿ ದಾಳಿ ಕೇವಲ ಕಾಂಗ್ರೆಸ್, ಜೆಡಿಎಸ್ ನಾಯಕರ ಮೇಲೆ ಮಾತ್ರ ನಡೆಯುತ್ತದೆ’ ಎಂದು ದೂರಿದ ಅವರು, ‘ಬಿಜೆಪಿ ಅಭ್ಯರ್ಥಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದು ಎಲ್ಲೂ ಕಾಣಿಸಲೇ ಇಲ್ಲ’ ಎಂದರು ‘ಐಟಿ, ಇ.ಡಿ ಬಿಜೆಪಿ ಪ್ರೈವೇಟ್ ಡಿಪಾರ್ಟ್‌ಮೆಂಟ್‌ ಆಗಿದೆ. ಸೋಲುವ ಭೀತಿಯಿಂದ ವಿರೋಧ ಪಕ್ಷಗಳ ಅಭ್ಯರ್ಥಿಗಳ ಮೇಲೆ ದಾಳಿ ನಡೆಸಿ ಕೆಟ್ಟ ಹೆಸರು ಬರುವಂತೆ ಬಿಜೆಪಿಯವರು ಮಾಡುತ್ತಾರೆ. ಆ ಮೂಲಕ, ಅಭ್ಯರ್ಥಿಗಳನ್ನು ಮಾನಸಿಕವಾಗಿ ಕುಗ್ಗು ವಂತೆ ಮಾಡುತ್ತಾರೆ’ ಎಂದೂ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ