Mysore
25
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ಜಿಎಸ್‌ಟಿ ಸಂಗ್ರಹ: ಕರ್ನಾಟಕಕ್ಕೆ ಎರಡನೇ ಸ್ಥಾನ

ನವದೆಹಲಿ: ಕಳೆದ ತಿಂಗಳು ಸಂಗ್ರಹವಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) 1.60 ಲಕ್ಷ ಕೋಟಿ ರೂ. ಮೊತ್ತದಲ್ಲಿ ಕರ್ನಾಟಕದ ಪಾಲು 10,360 ಕೋಟಿ ರೂ. ಇದೆ. ಈ ಮೂಲಕ ಅದು ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ರಾಜ್ಯದ ಮಟ್ಟಿಗೆ ಹೇಳುವುದಿದ್ದರೆ, ಶೇ.18.4 ಏರಿಕೆಯಾಗಿದೆ. 2022ರ ಮಾರ್ಚ್‌ಗೆ ಹೋಲಿಕೆ ಮಾಡಿದರೆ ಕರ್ನಾಟಕದಿಂದ ಹೆಚ್ಚಿನ ಮೊತ್ತ ಸಂಗ್ರಹವಾಗಿದೆ.

ಮಹಾರಾಷ್ಟ್ರದಿಂದ 22,695 ಕೋಟಿ ರೂ. ಸಂಗ್ರಹವಾಗುವ ಮೂಲಕ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ ಎಂದು ಕೇಂದ್ರ ವಿತ್ತ ಸಚಿವಾಲಯ ಮಾಹಿತಿ ನೀಡಿದೆ. ಗುಜರಾತ್‌ನಿಂದ 9,919 ಕೋಟಿ ರೂ. ಸಂಗ್ರಹವಾಗಿ ಮೂರನೇ ಸ್ಥಾನ ಪಡೆದುಕೊಂಡಿದೆ.

ದಿಲ್ಲಿಯ ನೆರೆಯ ರಾಜ್ಯವಾಗಿರುವ ಹರಿಯಾಣ ಈ ಬಾರಿ 7,780 ಕೋಟಿ ರೂ. ಕೊಡುಗೆ ನೀಡುವ ಮೂಲಕ ಐದನೇ ಸ್ಥಾನ ಪಡೆದುಕೊಂಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!