Mysore
21
overcast clouds

Social Media

ಶುಕ್ರವಾರ, 03 ಜುಲೈ 2026
Light
Dark

IPL: ಮಳೆ ಕಾಡಿದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಪಂಜಾಬ್‌ಗೆ ಗೆಲುವು

ಮೊಹಾಲಿ: ಮೊಹಾಲಿಯಲ್ಲಿ ಶನಿವಾರ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ಮತ್ತು ಪಂಜಾಬ್‌ ಕಿಂಗ್ಸ್‌ ತಂಡದ ನಡುವೆ ನಡೆದ ಪಂದ್ಯಕ್ಕೆ ಮಳೆ ಕಾಡಿತು. ವರ್ಷಧಾರೆಯಿಂದಾಗಿ ಎರಡನೇ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ನಿಂತು ಹೋದ ಪಂದ್ಯದ ಫಲಿತಾಂಶವನ್ನು ಡಕ್ವರ್ತ್‌ ಲೂಯಿಸ್‌ ನಿಯಮದ ಅನುಸಾರ ಪ್ರಕಟಿಸಲಾಗಿದ್ದು, ಪಂಜಾಬ್‌ ಏಳು ರನ್‌ಗಳಿಂದ ಗೆದ್ದಿದೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಶ್ರೀಲಂಕಾದ ಭಾನುಕಾ ರಾಜಪಕ್ಸೆ ಅವರ ಅರ್ಧಶತಕದ ನೆರವಿನಿಂದ, 20 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 191ರನ್‌ ಗಳಿಸಿತ್ತು.

ಇದಕ್ಕೆ ಉತ್ತರವಾಗಿ ಕೆಕೆಆರ್ 16 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 146 ರನ್ ಗಳಿಸಿತು. ಈ ವೇಳೆ ಸುರಿದ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು.

ತೀವ್ರ ಮಳೆಯಿಂದಾಗಿ ಪಂದ್ಯದ ಫಲಿತಾಂಶವನ್ನು ಡಕ್ವರ್ತ್‌ ಲೂಯಿಸ್‌ ನಿಯಮದ ಅಡಿ ಪ್ರಕಟಿಸಲಾಯಿತು. ಅದರಂತೆ ಕೆಕೆಆರ್‌ಗೆ 7ರನ್‌ಗಳ ಸೋಲು ಕಂಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!