Mysore
23
haze

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ನೀತಿ ಸಂಹಿತೆ ಜಾರಿ : ಕಟೌಟ್-ಬ್ಯಾನರ್ ತೆರವು

ಔರಾದ್: ವಿಧಾನಸಭೆ ಚುನಾವಣೆ ಘೋಷಣೆಯಾಗಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣದ ವಿವಿಧೆಡೆಯ ಸರ್ಕಾರಿ ಹಾಗೂ ರಾಜಕಾರಣಿಗಳ ಬ್ಯಾನರ್ ತೆರವು ಮಾಡಲಾಯಿತು.
ಪಟ್ಟಣದ ಉದಗೀರ್ ರಸ್ತೆಯಲ್ಲಿ ಅಹಿಲ್ಯಾಬಾಯಿ ಹೊಳ್ಳಕರ್ ಸಮುದಾಯ ಭವನದ ಭೂಮಿ‌ ಪೂಜೆ ಕಾರ್ಯಕ್ರಮದ ವೇದಿಕೆ ಸುತ್ತ ಹಾಕಲಾದ ರಾಜಕಾಣಿಗಳ ಭಾವಚಿತ್ರ ತೆರವು ಮಾಡಲಾಯಿತು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಈ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಪೊಲೀಸರು ವೇದಿಕೆ ಬಳಿ ಬಂದು ತಪಾಸಣೆ ನಡೆಸಿದರು. ಇದು ರಾಜಕೀಯ ಕಾರ್ಯಕ್ರಮ ಅಲ್ಲ. ಇದು ಒಂದು ಸಮಾಜದ ಧಾರ್ಮಿಕ ಕಾರ್ಯಕ್ರಮ ಎಂದು ಸಂಘಟಕರು ಪೊಲೀಸರಿಗೆ ಮನವರಿಕೆ ಮಾಡಿದರು. ಸಮಾಜದ ಮುಖಂಡರು ಸೇರಿ ಕಾರ್ಯಕ್ರಮ ಮಾಡಿ ಮುಗಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!