Mysore
17
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಕರ್ನಾಟಕದಲ್ಲಿ ಕೃತಕ ಬುದ್ಧಿಮತ್ತೆ ಕೇಂದ್ರ ಸ್ಥಾಪನೆ: ರಾಜೀವ್‌ ಚಂದ್ರಶೇಖರ್

ಬೆಂಗಳೂರು: 2023–24ನೇ ಸಾಲಿನ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಮೂರು ಕೃತಕ ಬುದ್ಧಿಮತ್ತೆ ಉತ್ಕೃಷ್ಠತೆ ಕೇಂದ್ರಗಳ (AI centre of excellence) ಪೈಕಿ ಒಂದು ಕೇಂದ್ರ ಕರ್ನಾಟಕಕ್ಕೆ ಲಭಿಸಲಿದೆ ಎಂದು ವರದಿಯಾಗಿದೆ.

2023-24ನೇ ಬಜೆಟ್‌ನಲ್ಲಿ ದೇಶದ ಮೂರು ಕಡೆಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ ಕೇಂದ್ರಗಳನ್ನು ಸ್ಥಾಪನೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಈ ಕೇಂದ್ರಗಳು ಉದ್ಯಮಿಗಳಿಗೆ ಸಂಶೋಧನೆ ಹಾಗೂ ಅಧ್ಯಯನ ನಡೆಸಲು ಹಾಗೂ ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ನೆರವು ನೀಡಲಿದೆ.

‘ಕರ್ನಾಟಕವು ಒಂದು ಕೃತಕ ಬುದ್ಧಿಮತ್ತೆ ಉತ್ಕೃಷ್ಠತೆ ಕೇಂದ್ರವನ್ನು ನಿರೀಕ್ಷಿಸಬಹುದು, ಈಗಾಗಲೇ ರಾಜ್ಯ ಸರ್ಕಾರವು ಈಗಾಗಲೇ ಅದಕ್ಕೆ ಅರ್ಜಿ ಸಲ್ಲಿಸಿದ್ದು, ನಾನು ಈ ಬಗ್ಗೆ ಒಲವು ತೋರಿಸಿದ್ದೇನೆ‘ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಹಾಗೂ ಐಟಿ ಖಾತೆಯ ರಾಜ್ಯ ಸಚಿವರಾದ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಅಲ್ಲದೇ ಡಬಲ್‌ ಎಂಜಿನ್‌ ಫ್ಯಾಕ್ಟರ್‌ ಕರ್ನಾಟಕಕ್ಕೆ ಲಾಭ ತಂದುಕೊಡುತ್ತಿದೆ ಎಂದು ಅವರು ಹೇಳಿದ್ದಾರೆ.

ಕಳೆದ ವಾರವಷ್ಟೇ ಧಾರವಾಡದಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!