ಸುತ್ತೂರು : ಕಬಿನಿ ಬಲದಂಡೆ ನಾಲೆ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಈಗಾಗಲೇ ಕಬ್ಬು, ಬಾಳೆ ಇನ್ನಿತರ. ತೋಟಗಾರಿಕೆ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿರುವುದಲ್ಲದೆ, ಜಾನುವಾರುಗಳಿಗೂ. ಕುಡಿಯುವ ನೀರಿನ ವ್ಯವಸ್ಥೆಯ ಬೇಕಾಗಿರುವುದರಿಂದ ಬಿನಿ ಬಲದಂಡೆ ನಾಲೆಯಿಂದ ನೀರು ಬಿಡುವಂತೆ ರೈತರು ಮನವಿ ಮಾಡಿದ್ದಾರೆ.
ಜೊತೆಗೆ ಅರೆ ನೀರಾವರಿ ಬೆಳೆಗಳಿಗೆ ನೀರು ಬಿಡುವುದರಿಂದ ಜಾನುವಾರುಗಳಿಗೂ ಮೇವು ಲಭ್ಯವಾಗಲಿದೆ ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಾಲೆಗೆ ನೀರು ಹರಿಸಬೇಕೆಂದು ಸ್ಥಳೀಯ ಜಿಲ್ಲಾ ರೈತ ಮುಖಂಡರುಗಳಾದ ಬಿಳಿಗೆರೆ ಗುರು ಲಿಂಗೇ ಗೌಡ, ಬೊಕ್ಕಳ್ಳಿ ನಂಜುಂಡಸ್ವಾಮಿ ಮುಂತಾದವರು ಮನವಿ ಮಾಡಿದ್ದಾರೆ.
ಚಿತ್ರ ಕೃಪೆ : ಸುತ್ತೂರು ನಂಜುಂಡನಾಯಕ