ಮೈಸೂರು: ಬೆಂಗಳೂರಿನ ಪ್ರವರ ಥಿಯೇಟರ್ ರಂಗ ತಂಡದ ವತಿಯಿಂದ ಫೆ.26ರಂದು ಸಂಜೆ 4 ಮತ್ತು 7ಕ್ಕೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಅಣ್ಣನ ನೆನಪು’ ಕೃತಿ ಆಧರಿಸಿದ ಸಾಕ್ಷ್ಯ ನಾಟಕ ಪ್ರದರ್ಶನ ನಡೆಯಲಿದೆ ಎಂದು ನಿರ್ದೇಶಕ ಹನು ರಾಮ ಸಂಜೀವ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃತಿಯನ್ನು ಕರಣಂ ಪವನ್ ಪ್ರಸಾದ್ ರಂಗರೂಪಕ್ಕಿಳಿಸಿದ್ದು, ಅಕ್ಷಯ್ ಭೋಂಸ್ಲೆ ಸಂಗೀತ, ಅಶ್ವಿನಿ ಗಲಗಲಿ ಮತ್ತು ವಿಭಾ ಗುರುರಾಜ್ ಗಾಯನ, ಸಿ.ಎನ್.ಚೇತನ್ ನಿರ್ವಹಣೆ, ಭಟ್ ಕಾರ್ತಿಕೇಯ ಪ್ರಚಾರ ಕಲೆ, ಮಾಲತೇಶ ಬಡಿಗೇರ ಪ್ರಸಾಧನ ಮತ್ತು ಸೂರ್ಯ ಸಾಥಿ ಅವರು ಬೆಳಕು ನೀಡಲಿದ್ದಾರೆ. ಮಹೇಶ್ ಶಿವಣ್ನ, ಗೋಕುಲ ಸಹೃದಯ, ಬಿ.ಇ.ಭರತ್, ಸೋಹನ್ ನಾಗರಾಜು, ನಾಗಶ್ರೀ ಪುಟ್ಟರಾಜು, ಸುಭಿಕ್ಷ, ನಿಖಿಲ್ ಪ್ರಭು, ವೈ.ಎಂ.ಹೇಮಂತ್ ಪಾತ್ರಧಾರಗಳಾಗಿದ್ದಾರೆ ಎಂದು ಹೇಳಿದರು. ಇದೆ ವೇಳೆ ನಾಟಕದ ಭಿತ್ತಿಚಿತ್ರವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಅಕ್ಷ್‌ಂ ಭೋಂಸ್ಲೆ, ಸಿ.ಎನ್.ಚೇತನ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.





