Mysore
25
overcast clouds

Social Media

ಶನಿವಾರ, 04 ಜುಲೈ 2026
Light
Dark

ಕೆಲಸದ ವೇಳೆ ಅಸ್ವಸ್ಥ; ಲೈನ್‌ಮನ್ ಸಾವು

ಮೈಸೂರು: ಕೆಲಸ ಮಾಡುತ್ತಿದ್ದ ವೇಳೆ ತೀವ್ರ ಆಯಾಸಕ್ಕೆ ಒಳಗಾದ ಲೈನ್‌ಮನ್ ಒಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನಗರದಲ್ಲಿ ನಡೆದಿದೆ. ಚಾಮುಂಡಿಪುರಂ ಶಾಖೆಯ ಸರ್ವಿಸ್ ಸ್ಟೇಷನ್ ನೌಕರ, ಕನಕಗಿರಿ ನಿವಾಸಿ ಮಹದೇವ(58) ಮೃತಪಟ್ಟವರು. ಭಾನುವಾರ ಮಧ್ಯಾಹ್ನ 1.30 ರ ಸುಮಾರಿನಲ್ಲಿ ನಗರದ ಮೈಸೂರು – ಮಾನಂದವಾಡಿ ರಸ್ತೆಯ ಸ್ಯಾಂಡಲ್ ಫ್ಯಾಕ್ಟರಿ ಬಳಿ ಇರುವ ಕೆಇಬಿಗೆ ಹೋಗುವ ರಸ್ತೆಯಲ್ಲಿ ಜಂಪ್ ರೀವರ್ಕ್ ನಡೆಯುತ್ತಿತ್ತು. ಈ ವೇಳೆ ಏಣಿಯಲ್ಲಿ ಕೆಲಸ ಮಾಡುತ್ತಿದ್ದ ಮಹದೇವು ಅವರು ತೀವ್ರ ಆಯಾಸಗೊಂಡಿದ್ದಾರೆ. ಇದನ್ನು ಗಮನಿಸಿದ ಕೆಳಗಿದ್ದ ಸಿಬ್ಬಂದಿ ಏಣಿ ಹತ್ತಿ ಅವರನ್ನು ಇಳಿಸಿಕೊಂಡು, ತಕ್ಷಣ ಜೆ.ಪಿ. ನಗರದ ಕಾಮಾಕ್ಷಿ ಆಸ್ಪತ್ರೆಗೆ ದಾಖಲಾಗಿಸಿದ್ದಾರೆ. ಅಲ್ಲಿ ವೈದ್ಯರು ತಪಾಸಣೆ ನಡೆಸಿ, ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ನಗರ ಅಶೋಕಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!