Mysore
23
light rain

Social Media

ಮಂಗಳವಾರ, 29 ಸೆಪ್ಟೆಂಬರ್ 2026
Light
Dark

ಟಿ20 ವಿಶ್ವಕಪ್: ಹರ್ಮನ್‌ಪ್ರೀತ್ –ರಿಚಾ ಮಿಂಚು, ವಿಂಡೀಸ್ ವಿರುದ್ಧ ಗೆದ್ದ ಭಾರತ

ಕೇಟ್‌ಟೌನ್‌: ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಭಾರತ ತಂಡವು ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಬುಧವಾರ ವೆಸ್ಟ್‌ ಇಂಡೀಸ್ ವಿರುದ್ಧ ಆರು ವಿಕೆಟ್‌ ಅಂತರದಿಂದ ಗೆಲುವು ಸಾಧಿಸಿತು. 

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್‌ ಇಂಡೀಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತ್ತು. ಸ್ಟೆಫಾನಿ ಟೈಲರ್ 42, ಶೆಮೈನ್ ಕ್ಯಾಂಪ್‌ಬೆಲ್ 30, ಚೆಡಿಯನ್ ನೇಷನ್ 21 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು.

119 ರನ್‌ ಗುರಿ ಬೆನ್ನತ್ತಿದ ಭಾರತ 18.1 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಭಾರತದ ಪರ ರಿಚಾ ಘೋಷ್ ಔಟಾಗದೆ 44, ಹರ್ಮನ್‌ಪ್ರೀತ್ ಕೌರ್ 33, ಶಫಾಲಿ ವರ್ಮಾ 28 ರನ್ ಗಳಿಸಿ ಗೆಲುವಿನ ರೂವಾರಿಗಳಾದರು.

ವೆಸ್ಟ್‌ ಇಂಡೀಸ್ ಪರ ಕರಿಷ್ಮಾ ರಾಮ್‌ಹರಾಕ್ 2, ಹೇಲಿ ಮ್ಯಾಥ್ಯೂಸ್, ಚಿನೆಲ್ಲೆ ಹೆನ್ರಿ ತಲಾ ಒಂದೊಂದು ವಿಕೆಟ್ ಪಡೆದರು. ಭಾರತ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಫೆ.12ರಂದು (ಭಾನುವಾರ) ಪಾಕಿಸ್ತಾನ ವಿರುದ್ಧ ಏಳು ವಿಕೆಟ್‌ ಅಂತರದಿಂದ ಗೆಲುವು ಸಾಧಿಸಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!