Mysore
20
few clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ತಿ.ನರಸೀಪುರ : ಮುಸುವಿನ‌ಕೊಪ್ಪಲು ಗ್ರಾಮದಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ

ತಿ.ನರಸೀಪುರ :  -ತಾಲೂಕಿನ ಮುಸುವಿನ ಕೊಪ್ಪಲು ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿನಲ್ಲಿ ಫೆಬ್ರವರಿ 10ರಂದು ಜೋಡಿ ಚಿರುತೆಗಳು ಬೋನಿಗೆ ಬಿದ್ದಿದ್ದವು, ಅದೇ ಬೋನಿಗೆ ಮಂಗಳವಾರ ರಾತ್ರಿ 9:00 ಸಮಯದಲ್ಲಿ ಎಂಟು ತಿಂಗಳ ಮರಿ ಚಿರತೆ ಬೋನಿಗೆ ಬಿದ್ದಿದೆ.

ತಾಲೂಕಿನಾದ್ಯಂತ ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಚಿರತೆ ಚಲನ ವಲನಗಳನ್ನು ಗುರುತಿಸಿ ವಿವಿಧ ಗ್ರಾಮಗಳ ಆಯ್ದ ಸ್ಥಳಗಳಲ್ಲಿ ಚಿರತೆ ಸೆರೆಗೆ ಬೋನುಗಳನ್ನು ಇರಿಸಿದ್ದರು. ತಾಯಿ ಹಾಗೂ ಮರೀಚಿರತೆ ಬೋನಿಗೆ ಬೀಳುವ ಮೂಲಕ ಮತ್ತೊಂದು ಮರಿ ಚಿರತೆ ಇದೆ ಎಂಬ ಆತಂಕ ಎಲ್ಲರಲ್ಲಿ ಮನೆ ಮೂಡಿತ್ತು, ಈಗ ಆ ಮರಿಚಿರತೆ ಇಂದು ಬೋನಿಗೆ ಬೀಳುವ ಮೂಲಕ ನಾಗರಿಕಲ್ಲಿ ಮೂಡಿರುವ ಆತಂಕ ಸ್ವಲ್ಪಮಟ್ಟಿಗೆ ವಿರಾಮ ದೊರಕಿದಂತಾಗಿದೆ,

ಇಂದು‌ ಸಂಜೆ ಗ್ರಾಮದ ಚಂದ್ರಪ್ಪ ಎಂಬುವರ ಜಮೀನಿನಲ್ಲಿ ಇಟ್ಟಿದ್ದ ಭೂಮಿನೊಳಗೆ ಮೇಕೆ ಮರಿ ಕಟ್ಟಿ ಹಾಕಲಾಗಿತ್ತು ಅದನ್ನು ತಿನ್ನಲು ಬಂದ ಎಂಟು ತಿಂಗಳ ಮರಿ ಚಿರತೆ ಸರಿಯಾಗಿದೆ, ಸೆರೆ ಸಿಕ್ಕ ಚಿಗತೆಮರಿಯನ್ನು ರಾತ್ರಿಯೇ ಮೈಸೂರು ಅರಣ್ಯ ಭವನಕ್ಕೆ ಸಾಗಿಸಲಾಯಿತು ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ, ನಂತರ ಅರಣ್ಯ ಅಧಿಕಾರಿಗಳ ಆದೇಶದ ಮೇರೆಗೆ ಮುಂದಿನ ಕ್ರಮ ಜರಿಸಲಾಗುವುದು,

ಸ್ಥಳಕ್ಕೆ ತಿ. ನರಸೀಪುರ ವಲಯ ಅರಣಾಧಿಕಾರಿ ಸಯಿದ್ ನದೀಮ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಚಿರತೆ ಬಲೆಗೆ ಬಿದ್ದ ಸುದ್ದಿ ಹಬ್ಬುತ್ತಿದ್ದಂತೆ ಗ್ರಾಮಸ್ಥರು ರಾತ್ರಿ ವೇಳೆಯಾದರೂ ಚಿರತೆಯನ್ನು ವೀಕ್ಷಣೆ ಮಾಡಲು ಜಮಾವಣೆಗೊಂಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!