Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

ತಿ.ನರಸೀಪುರ: ಬೋನಿಗೆ ಬಿದ್ದ ಎರಡು ಚಿರತೆಗಳು

ತಿ.ನರಸೀಪುರ (ಮೈಸೂರು):  ತಾಲ್ಲೂಕಿನ ಮುಸುವಿನಕೊಪ್ಪಲು‌ ಗ್ರಾಮದಲ್ಲಿ‌ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಗುರುವಾರ ರಾತ್ರಿ ಎರಡು ಚಿರತೆಗಳು ಸೆರೆಯಾಗಿವೆ. 

ವಾರದ ಹಿಂದಷ್ಟೇ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆ‌ ಮೇಲೆ ದಾಳಿ ನಡೆಸಿದ್ದ ಚಿರತೆಯು ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆಯು ಬೋನು ಇರಿಸಿತ್ತು. ತಾಯಿ ಚಿರತೆ ಹಾಗೂ ಮರಿ ಚಿರತೆ ಬಿದ್ದಿವೆ‌.

ಶುಕ್ರವಾರ ಬೆಳಿಗ್ಗೆ  ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಚಿರತೆ ನೋಡಲು ಜಮಾಯಿಸಿದ್ದರು. ಡಿಸಿಎಫ್ ಡಾ.ಬಸವರಾಜು, ಎಸಿಎಫ್ ಲಕ್ಷ್ಮಿಕಾಂತ್, ಆರ್ ಎಫ್ಒ ಸೈಯದ್ ನದೀಮ್, ಡಿಆರ್ ಎಫ್ ಒ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು‌. ಮೈಸೂರಿನ ಅರಣ್ಯ ಭವನಕ್ಕೆ ಒಯ್ಯಲಾಗಿದ್ದು, ಅರಣ್ಯ ಪ್ರದೇಶಕ್ಕೆ ಬಿಡಲು ಕ್ರಮವಹಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!