Mysore
20
few clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

ಬೈಕ್‌ನಲ್ಲಿ ತೆರಳಿ ಸಮಸ್ಯೆ ಆಲಿಸಿದ ಡಾ.ಯತೀಂದ್ರ

ವರುಣ: ಕ್ಷೇತ್ರದ ಮೆಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಕಾರ್ಯಕರ್ತ ಪ್ರಶಾಂತ್ ಅವರ ಬೈಕ್‌ನಲ್ಲಿ ಗ್ರಾಮಗಳ ಮನೆಮನೆಗೂ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ಪ್ರತಿಯೊಂದು ಬೀದಿಯಲ್ಲೂ ಜನರ ಸಮಸ್ಯೆ ಆಲಿಸಲು ಬೈಕ್‌ನಲ್ಲಿ ತೆರಳುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವುದು ನನ್ನ ಉದ್ದೇಶ ಎಂದರು. ಗ್ರಾಮದ ನಾಗರಾಜು, ಗಂಗನ ತಿಮ್ಮಯ್ಯ, ರವಿ ಗೌಡ, ಪ್ರಶಾಂತ್ ನಾಯಕ, ಸಿದ್ದಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!