Mysore
16
broken clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ನಾನು ತಿಳಿಯದೆ ನಿಷೇಧಿತ ವಸ್ತು ಸೇವಿಸಿದ್ದೆ : ಟ್ವೀಟ್‌ ಬರೆದು ​ ತಪ್ಪೊಪ್ಪಿದ ಜಿಮ್ನಾಸ್ಟ್ ದೀಪಾ ಕರ್ಮಾಕರ್

ನವದೆಹಲಿ: ಡೋಪಿಂಗ್ ಟೆಸ್ಟ್​ನಲ್ಲಿ ಅನುತ್ತೀರ್ಣರಾಗಿ​ 21 ತಿಂಗಳ ಕಾಲ ನಿಷೇಧ ಶಿಕ್ಷೆಗೊಳಗಾಗಿದ್ದ ಜಿಮ್ನಾಸ್ಟ್​ ದೀಪಾ ಕರ್ಮಾಕರ್ ಅವರಿಗೆ ತನ್ನ ತಪ್ಪಿನ ಅರಿವಾಗಿದ್ದು, ಗೊತ್ತಿಲ್ಲದೇ ನಿಷೇಧಿತ ಪದಾರ್ಥಗಳನ್ನು ಸೇವಿಸಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್​ನಲ್ಲಿ ವಿಸ್ತಾರವಾಗಿ ಬರೆದುಕೊಂಡಿರುವ ಕರ್ಮಾಕರ್, “ನಾನು ವೃತ್ತಿ ಜೀವನಕ್ಕಾಗಿ ನಡೆಸಿದ ಸುದೀರ್ಘ ಯುದ್ಧದಲ್ಲಿ ಒಂದನ್ನು ಕೊನೆಗೊಳಿಸಿದ್ದೇನೆ. 2021ರಲ್ಲಿ ನನ್ನ ಡೋಪಿಂಗ್​ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ನನ್ನ ಅರಿವಿಗೆ ಬಾರದೇ ನಿಷೇಧಿತ ಪದಾರ್ಥವನ್ನು ಸೇವಿಸಿದ್ದೆ. ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ಬಂದಿದೆ. ನನ್ನ ದೇಹ ಸೇರಿದ ನಿಷೇಧಿತ ವಸ್ತುವಿನ ಮೂಲ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ” ಎಂದಿದ್ದಾರೆ.”

 

ಈ ವಿಷಯ ಸೌಹಾರ್ದಯುತವಾಗಿ ಬಗೆಹರಿದಿರುವುದು ನನಗೆ ಸಂತಸ ತಂದಿದೆ. ನನ್ನ ಅಮಾನತು ಅವಧಿಯನ್ನು 3 ತಿಂಗಳು ಕಡಿಮೆ ಮಾಡಲಾಗಿದೆ. ಜುಲೈ 2023ರಲ್ಲಿ ನಾನು ಇಷ್ಟಪಡುವ ಕ್ರೀಡೆಗೆ ಮತ್ತೆ ಮರಳಲು ಅವಕಾಶವಿದೆ. ಆದರೆ ನಿಷೇಧಿತ ಪದಾರ್ಥಗಳು ನನ್ನ ದೇಹವನ್ನು ಹೇಗೆ ಪ್ರವೇಶಿಸಿದವು ಎಂಬುದು ತಿಳಿಯದಿರುವುದು ದುಃಖ ತರಿಸಿದೆ. ನನ್ನ ವೃತ್ತಿಜೀವನದಲ್ಲಿ ಎಂದಿಗೂ ಅಂತಹ ವಸ್ತುಗಳನ್ನು ಸೇವಿಸುವ ಆಲೋಚನೆಯೇ ನನಗೆ ಬಂದಿರಲಿಲ್ಲ. ಜಿಮ್ನಾಸ್ಟಿಕ್​ ನನ್ನ ರಕ್ತದಲ್ಲಿದೆ. ನಾನು ದೇಶಕ್ಕೆ ಅಪಖ್ಯಾತಿ ತರುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!