Mysore
24
haze

Social Media

ಶನಿವಾರ, 03 ಜನವರಿ 2026
Light
Dark

ಚಾ.ನಗರ : ಬಿಆರ್‌ಟಿಯ ಪಕ್ಷಿ ಸಮೀಕ್ಷೆಯಲ್ಲಿ 2 ಹೊಸ ಪ್ರಭೇದ ಪತ್ತೆ

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾನುವಾರ ಮುಕ್ತಾಯಗೊಂಡ ಪಕ್ಷಿ ಸಮೀಕ್ಷೆಯಲ್ಲಿ ಎರಡು ಹೊಸ ಪ್ರಭೇದ ಪತ್ತೆಯಾಗಿವೆ.

ವಲಸೆ ಪಕ್ಷಿಗಳಾದ ನಾರ್ದರ್ನ್‌ ಶೆವೆಲರ್‌ (ಸಲಿಕೆ ರೀತಿಯ ಕೊಕ್ಕುಳ್ಳ ಬಾತು) ಹಾಗೂ ನಾರ್ದರ್ನ್ ಪಿನ್‌ಟೇಲ್‌ (ಸೂಜಿಬಾಲದ ಬಾತು) ಪಕ್ಷಿಗಳನ್ನು ಸ್ವಯಂಸೇವಕರು ಹೊಸದಾಗಿ ಗುರುತಿಸಿದ್ದಾರೆ ಎಂದು ಬಿಆರ್‌ಟಿಯ ನಿರ್ದೇಶಕಿ ಮತ್ತು ಡಿಸಿಎಫ್‌ ದೀಪ್‌ ಜೆ.ಕಾಂಟ್ರಾಕ್ಟರ್‌ ಹೇಳಿದ್ದಾರೆ.

‘ಹಲವು ವರ್ಷದ ನಂತರ ದಿ ಗ್ರೇಟ್‌ ಹಾರ್ನ್‌ಬಿಲ್‌ ಪಕ್ಷಿಯೂ ಬಿಆರ್‌ಟಿಯಲ್ಲಿ ಕಂಡು ಬಂದಿದೆ. 2012ರಲ್ಲಿ ವೈಜ್ಞಾನಿಕವಾಗಿ ಪಕ್ಷಿ ಗಣತಿ ಮಾಡಲಾಗಿತ್ತು. ಆಗ 272 ಪ್ರಭೇದಗಳನ್ನು ಗುರುತಿಸಲಾಗಿತ್ತು. ಈ ಬಾರಿ ಸ್ವಯಂ ಸೇವಕರು 274 ಪಕ್ಷಿಗಳನ್ನು ಗುರುತಿಸಿದ್ದಾರೆ’ ಎಂದು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!