Mysore
23
overcast clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಬಾಳೆಗೆ ನೀರು ಕಟ್ಟುವಾಗಲೇ ಪ್ರಾಣಬಿಟ್ಟ ರೈತ

ಚಾಮರಾಜನಗರ: ತಾಲ್ಲೂಕಿನ ಕೋಡಿಮೋಳೆ ಗ್ರಾಮದ ರೈತ ಮುಖಂಡ ಕೆ.ಸಿ.ನಾಗರಾಜು (68) ಹೃದಯಾಘಾತದಿಂದ ನಿಧನರಾದರು.
ತೋಟದಲ್ಲಿ ಬೆಳಿಗ್ಗೆ ಬಾಳೆಗೆ ನೀರು ಕಟ್ಟುವಾಗ ಹೃದಯಾಘಾತವಾಗಿದ್ದು ಈ ವೇಳೆ ನೋವಿನಿಂದ ಬಾಳೆಗಿಡಕ್ಕೆ ಒರಗಿ ಕುಳಿತ ಸ್ಥಿತಿಯಲ್ಲೇ ನಾಗರಾಜು ಪ್ರಾಣಬಿಟ್ಟಿದ್ದಾರೆ. ಜೆಎಸ್‌ಎಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ಸಾವಿಗೀಡಾಗಿರುವುದನ್ನು ಖಚಿತಪಡಿಸಿದರು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಸ್ವಗ್ರಾಮದ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇವರ ನಿಧನಕ್ಕೆ  ಕೋಡಿಮೋಳೆ ರಾಜಶೇಖರ್ ಸಂತಾಪ ಸೂಚಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ