ಮೈಸೂರು : ನಗರದ ಚಲುವಾಂಬ ಉದ್ಯಾನವನದಲ್ಲಿಂದು ಮೈಸೂರು ಗ್ರಾಹಕರ ಪರಿಷತ್ತಿನ ಕರೆಗೆ ಓಗೊಟ್ಟ ಪಟ್ಟಣದ ಹಲವು ನಾಗರೀಕರು ಸರ್ಕಾರದ ಪಾರದರ್ಶಕ ಆಡಳಿತಕ್ಕಾಗಿ ಆಗ್ರಹಿಸಿ ಮೌನ ಸತ್ಯಾಗ್ರಹವನ್ನು ನಡೆಸಿದರು.
ಬೆಳಿಗ್ಗೆ 9ರ ವೇಳೆಗೆ ಒಂದೆಡೆ ಸೇರಿದ ನಾಗರಿಕರು ಸರಕಾರದ ಆಡಳಿತದಿಂದ ಹೇಗೆ ಭ್ರಮ ನಿರಸನವಾಗಿದೆ..ಲಂಚ.ಬ್ರಷ್ಡಾಚಾರ, ವಿಳಂಬ ನೀತಿಗಳು ನಾಗರಿಕರ ದೈನಂದಿನ ಬದುಕನ್ನು ಹೈರಾಣ ಮಾಡಿದೆ ಎಂದು ಎಳೆ ಎಳೆಯಾಗಿ ಬಿಚ್ಚಿಟ್ಟರು.
ನಾಗರಿಕರನ್ನು ಮೈ.ಗ್ರಾ.ಪ ಸಂಚಾಲಕ ಭಾಮಿ.ವಿ.ಶಣೈ ಅವರು ಎಲ್ಲರನ್ನೂ ಸ್ವಾಗತಿಸಿದರು.
ಮೈ.ಗ್ರಾ.ಪದ ಆಜೀವ ಸದಸ್ಯ ಕೊಸು.ನರಸಿಂಹ ಮೂರ್ತಿ, ಸಿ.ಎಫ್.ಟಿ.ಆರ್.ಐ ನ ನಿವೃತ್ತ ನಿರ್ದೇಶಕ ವಿ.ಪ್ರಕಾಶ್.ಮೇ.ಜ.ಒಂಬತ್ಕಡರೆ, ವೆಂಕಟೇಶ ರಾವ್ ಉಷಾ ಡಾ.ಜಯರಾಮ್ ಮುಂತಾವರು ಸತ್ಯಾಗ್ರಹದ ಕುರಿತು ಮಾತನಾಡಿ ಸರಕಾರಿ ಕಚೇರಿಗಳು ವಿಶೇಷವಾಗಿ ಪ್ರಾದೇಶಿಕ ಸಾರಿಗೆ ಕಚೇರಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಹಲವು ಇಲಾಖೆಯ ಬಗ್ಗೆ ತಮ್ಮ ಅನುಭವವನ್ನು ತೆರೆದಿಟ್ಟರು. ಸತ್ಯಾಗ್ರಹದಲ್ಲಿ ಮೂವತ್ತು ಹೆಚ್ಚು ಮಂದಿ ಪಾಲ್ಗೊಂಡಿದ್ದರು.