Mysore
18
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಹರಕೆ ಹೊತ್ತು ಬಂದ ಅನ್ನದಾನಿಗೆ ಹನೂರಿನಲ್ಲಿ ಸ್ವಾಗತ

ಹನೂರು : ದೇಶ ವ್ಯಾಪ್ತಿಯಲ್ಲಿ ಹರಡಿದ್ದ ಕೊರೊನಾ ತಡೆಗಾಗಿ ಮಹದೇಶ್ವರಬೆಟ್ಟದ ಮಲೆ ಮಹದೇಶ್ವರರಲ್ಲಿ ಹರಕೆ ಮಾಡಿಕೊಂಡಿದ್ದೆ. ಇದೀಗ ಕೊರೊನಾ ಸೋಂಕು ಕಡಿಮೆ ಆಗಿರುವುದರಿಂದ ಹರಕೆ ತೀರಿಸಲು ಪಾದಯಾತ್ರೆ ಹೊರಟಿದ್ದೇವೆ ಎಂದು ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.

ಮಳವಳ್ಳಿ ಪಟ್ಟಣದಿಂದ ಹೊರಾಟ ಪಾದಯಾತ್ರೆ ಹನೂರಿಗೆ ಬಂದಂತಹ ಸಂದರ್ಭದಲ್ಲಿ ಶಾಸಕ ಕೆ.ಅನ್ನದಾನಿ ಮಾಧ್ಯಮದವರೊಂದಿಗೆ ಮಾತನಾಡಿ, 2019 ರಲ್ಲಿ ಕೊರೊನಾ ಬಂದ ಸಂದರ್ಭದಲ್ಲಿ ಮಳವಳ್ಳಿ ತಾಲ್ಲೂಕಿನಲ್ಲಿ ಹಲವರು ಜನರು ಸೋಂಕಿನಿಂದ ಮೃತಪಟ್ಟರು. ಔಷಧಿ ಇಲ್ಲದ ಸಂದರ್ಭದಲ್ಲಿ ಜನರನ್ನು ನೀನೇ ಕಾಪಾಡಬೇಕು ಮಾದಪ್ಪ ಎಂದು ನಾನು ಮನೆ ಮಾದೇಶ್ವರರಲ್ಲಿ ಹರಕೆ ಮಾಡಿಕೊಂಡಿದ್ದೆ. ಅದರಂತೆ ಪಾದಯಾತ್ರೆ ಹೊರಟಿದ್ದೇವೆ ಎಂದರು.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಜಾ.ದಳ ಅಭ್ಯರ್ಥಿಯಾಗಿರುವ ಎಂ.ಆರ್. ಮಂಜುನಾಥ್ ನನ್ನ ಆತ್ಮೀಯ ಸ್ನೇಹಿತರು. ಇವರು ಶಾಸಕರಾಗಿ ಆಯ್ಕೆಯಾಗಲಿ ಎಂದು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂದು ಹರಕೆ ಕಟ್ಟಿಕೊಳ್ಳುತ್ತೇನೆ ಎಂದು ತಿಳಿಸಿದರು. ಪಾದಯಾತ್ರೆಗೆ ಬಂದ ಅನ್ನದಾನಿ ಅವರಿಗೆ ಹನೂರು ಜಾ.ದಳ ಅಭ್ಯರ್ಥಿ ಎಂ.ಆರ್. ಮಂಜುನಾಥ್ ಅವರು ಸನ್ಮಾನಿಸಿದರು.  ಸುಮಾರು 1ಕಿ.ಮೀ. ದೂರ ಅವರೊಂದಿಗೆ ಪಾದಯಾತ್ರೆ ನಡೆಸಿ ಬೀಳ್ಕೊಟ್ಟರು.

ಮಳವಳ್ಳಿ ತಾಲ್ಲೂಕು ಜಾ.ದಳ ಅಧ್ಯಕ್ಷ ವಿಶ್ವನಾಥ್, ಜಿಪಂ ಮಾಜಿ ಸದಸ್ಯ ಹನುಮಂತು, ಜಿಲ್ಲಾ ಯುವ ಜಾ.ದಳದ ಅಧ್ಯಕ್ಷ ರವಿ, ಜಾ.ದಳ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲೇಗೌಡ, ಪಪಂ ಸದಸ್ಯ ಮಹೇಶ್, ಕಾರ್ಯಕರ್ತರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!