Mysore
27
scattered clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಉಕ್ರೇನ್‌ ಸೈನಿಕರಿಂದ 14 ಮಂದಿ ಹತ್ಯೆ: ರಷ್ಯಾ ಆರೋಪ

ಕೀವ್‌ : ‘ನಮ್ಮ ಹಿಡಿತದಲ್ಲಿರುವ ಪೂರ್ವ ಉಕ್ರೇನ್‌ ಪ್ರದೇಶದಲ್ಲಿನ ಆಸ್ಪತ್ರೆಯೊಂದರ ಮೇಲೆ ಉಕ್ರೇನ್‌ನ ಸೈನಿಕರು ಉದ್ದೇಶಪೂರ್ವಕವಾಗಿ ದಾಳಿ ನಡೆಸಿ 14 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು 24 ಮಂದಿ ಗಾಯಗೊಂಡಿದ್ದಾರೆ’ ಎಂದು ರಷ್ಯಾ ಶನಿವಾರ ಆರೋಪಿಸಿದೆ.

‘ನೊವಾಯ್ಡರ್‌ನಲ್ಲಿರುವ ಆಸ್ಪತ್ರೆ ಮೇಲೆ ಉಕ್ರೇನ್‌ ಯೋಧರು ಕ್ಷಿಪಣಿ ದಾಳಿ ನಡೆಸಿದ್ದಾರೆ. ಇದು ಅತ್ಯಂತ ಗಂಭೀರವಾದ ಯುದ್ಧ ಅಪರಾಧ ಎಂಬುದರಲ್ಲಿ ಅನುಮಾನವೇ ಇಲ್ಲ’ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

‘ಈ ಕೃತ್ಯಕ್ಕಾಗಿ ಯೋಜನೆ ರೂಪಿಸಿರುವವರು ಹಾಗೂ ಇದನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವರನ್ನು ಪತ್ತೆಹಚ್ಚಲಾಗುತ್ತದೆ. ಅವರಿಗೆ ತಕ್ಕ ಶಿಕ್ಷೆ ಆಗಲಿದೆ’ ಎಂದು ಹೇಳಿದೆ.ರ ರಷ್ಯಾ ದ ಆರೋಪದ ಕುರಿತು ಉಕ್ರೇನ್‌ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!