Mysore
22
overcast clouds

Social Media

ಬುಧವಾರ, 14 ಅಕ್ಟೋಬರ್ 2026
Light
Dark

ಹುಲ್ಲಹಳ್ಳಿ-ಕಾರ್ಯ ಮುಖ್ಯರಸ್ತೆಯಲ್ಲಿ ಚಿರತೆ ಪತ್ತೆ

ಹುಲ್ಲಹಳ್ಳಿ: ಹುಲ್ಲಹಳ್ಳಿ ಮತ್ತು ಕಾರ್ಯಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಮತ್ತು ರೈತರಲ್ಲಿ ಆತಂಕ ಮೂಡಿಸಿದೆ.
ಮಂಗಳವಾರ 8ಗಂಟೆಯಲ್ಲಿ ವಾಯುವಿಹಾರಕ್ಕೆ ತೆರಳಿದ ಚಂದ್ರು ಎಂಬವರಿಗೆ ರಸ್ತೆ ಬದಿಯ ಜೋಳದ ಕಡ್ಡಿಗಳ ನಡುವಿನ ಪೊದೆಯೊಳಗೆ ಮಲಗಿ ಚಿರತೆ ಗುಟುರು ಶಬ್ದ ಕೇಳಿ ಬಂದಿದೆ. ಇದಾದ ಬಳಿಕೆ ಕೆಲ ನಿಮಿಷಗಳಲ್ಲಿ ತಮ್ಮ ಸ್ನೇಹಿತರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಎಲ್ಲರೂ ಬಂದು ಚಿರತೆ ಇದ್ದ ಸ್ಥಳದಲ್ಲಿ ನಿಂತು ಅದರ ಶಬ್ಧವನ್ನು ಮೊಬೈಲ್‌ನಲ್ಲಿ ರೆಕಾರ್ಡಿಂಗ್ ಮಾಡಿಕೊಂಡಿದ್ದು, ಆ ಆಡಿಯೋ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ದುಗ್ಗಳ್ಳಿ ಮತ್ತು ಶೆಟ್ಟಿಹಳ್ಳಿ ರಸ್ತೆಯಲ್ಲಿ ಆಟೋ ಚಾಲಕನಿಗೆ ಹುಲಿ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಇದಾದ ಬಳಿಕ ಚಿರತೆಯ ಸದ್ದು ಕೇಳಿ ಬಂದಿರುವುದು ಮತ್ತಷ್ಟು ಭಯಗೊಳಿಸಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಅನಾಹುತ ಸಂಭವಿಸುವ ಮುನ್ನ ಚಿರತೆ ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!