Mysore
20
scattered clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಮೈಸೂರು : ಹೆಣ್ಣು ಮಕ್ಕಳ ದಿನ ಪ್ರಯುಕ್ತ ನೈರುತ್ಯ ರೈಲ್ವೆಯಿಂದ ವಿಶೇಷ ಸೇವೆ

ಮೈಸೂರು : ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಮೈಸೂರಿನ ನೈರುತ್ಯ ರೈಲ್ವೆಯ ರೈಲ್ವೆ ಮ್ಯೂಸಿಯಂನಲ್ಲಿ ಹೆಣ್ಣು ಮಕ್ಕಳಿಗೆ ಒಬ್ಬರು ಪೋಷಕರೊಂದಿಗೆ ಉಚಿತ ಪ್ರವೇಶ ನೀಡುತ್ತಿದೆ.
ಈ ಸೇವೆಯು ಮಂಗಳವಾರದಂದು ಅಂದರೆ ಜನವರಿ 24ರಂದು ಲಭ್ಯವಿದ್ದು ಒಂದು ಹೆಣ್ಣು ಮಗುವಿನ ಜೊತೆಗೆ ಒಬ್ಬ ಪೋಷಕರಿಗೆ ಉಚಿತ ಪ್ರವೇಶಾತಿಯನ್ನು ನೀಡಲಾಗುತ್ತಿದೆ.

ಅಂದಿನ ದಿನ ಮಂಗಳವಾರ ಮ್ಯೂಸಿಯಂ ಗೆ ನೀಡಲಾಗಿದ್ದ ರಜವನ್ನು ರದ್ದುಪಡಿಸಲಾಗಿದ್ದು. ಹೆಣ್ಣು ಮಕ್ಕಳ ಈ ದಿನಾಚರಣೆಯ ಪ್ರಯುಕ್ತ ಉಚಿತ ಪ್ರವೇಶ ನೀಡಲಾಗುತ್ತಿದೆ. ರಾಷ್ಟ್ರೀಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಭಾರತ ಸರ್ಕಾರ ಈ ದಿನವನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಾಗಿ ಆಚರಣೆ ಮಾಡುತ್ತ ಬರುತ್ತಿದೆ. ಇದರ ಮುಖ್ಯ ಉದ್ದೇಶ ಹೆಣ್ಣು ಮಕ್ಕಳನ್ನು ಸಮಾಜದಲ್ಲಿ ಗೌರವ ಮತ್ತು ಪ್ರಗತಿಯತ್ತ ಕೊಂಡೊಯ್ಯುವುದು ಆಗಿದೆ. ಇದರೊಂದಿಗೆ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸುವಂತಹ ಪ್ರಯತ್ನ ಇದಾಗಿದೆ.

ರೈಲ್ವೆ ಮ್ಯೂಸಿಯಂ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5:30ರ ವರೆಗೆ ಪ್ರವೇಶ ಅವಧಿಯಾಗಿರುತ್ತದೆ ಆಹಾರ ಪದಾರ್ಥಗಳನ್ನು ಮ್ಯೂಸಿಯಂ ನ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ ವೃತ್ತಿಪರ/DSLR ಬಳಸುವ ಫೋಟೋಗ್ರಾಫರ್ ಗಳು ನಿಗದಿತ ಶುಲ್ಕವನ್ನು ಪಾವತಿ ಮಾಡುವ ಮೂಲಕ ಮ್ಯೂಸಿಯಂ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ಮೈಸೂರು ಇದರ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಮಂಜುನಾಥ್‌ ತಿಳಿಸಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!