Mysore
28
overcast clouds

Social Media

ಭಾನುವಾರ, 05 ಜುಲೈ 2026
Light
Dark

ಕರ್ನಾಟಕ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಮೋಹನ್ ಕುಮಾರ್ ಆಯ್ಕೆ

ಸಾಲಿಗ್ರಾಮ: ಕರ್ನಾಟಕ ಪ್ರೆಸ್ ಕ್ಲಬ್‌ನ ಕೃಷ್ಣರಾಜನಗರ ತಾಲ್ಲೂಕು ಘಟಕದ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ‘ಆಂದೋಲನ’ ದಿನಪತ್ರಿಕೆಯ ವರದಿಗಾರ ಕೆ.ಟಿ.ಮೋಹನ್ ಕುಮಾರ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪ್ರಜಾನುಡಿ ಪತ್ರಿಕೆಯ ವರದಿಗಾರ ಸಿ.ವೈ.ಅಭಿಲಾಶ್, ಪ್ರಧಾನ ಕಾರ್ಯದರ್ಶಿಯಾಗಿ ಮೈಸೂರುಧ್ವನಿ ಪತ್ರಿಕೆ ಸಂಪಾದಕ ಕೆ.ಎನ್.ತುಳಸಿಕುಮಾರ್, ಕಾರ್ಯದರ್ಶಿಯಾಗಿ ಇಂಡಿಯನ್ ಟಿವಿ ವರದಿಗಾರ ಸಿ.ಮಂಜುನಾಥ, ಖಜಾಂಚಿಯಾಗಿ ಮೈಸೂರುಮಿತ್ರ ವರದಿಗಾರ ಎಂ.ಪಿ.ಮಂಜುನಾಥ, ಸಹ ಕಾರ್ಯದರ್ಶಿಯಾಗಿ ವಿಜಯವಾಣಿ ಪತ್ರಿಕೆಯ ವರದಿಗಾರ ಎಸ್.ಲೋಕೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಎಸಿಎನ್ ನ್ಯೂಸ್ ಚಾನಲ್‌ನ ಸಂಪಾದಕ ಕೆ.ಆರ್.ಶ್ಯಾಮಸುಂದರ್, ವೈಬ್ರೆಂಟ್ ಮೈಸೂರು ಪತ್ರಿಕೆಯ ವರದಿಗಾರ ಎಸ್.ಲಿಖಿತ್, ಸಂಚಾಲಕರುಗಳಾಗಿ ಎಸಿಎನ್ ನ್ಯೂಸ್ ಚಾನೆಲ್‌ನ ವರದಿಗಾರ ಎಂ.ಎಸ್.ನರಸಿಂಹ, ಆರ್.ಜೆ.ನ್ಯೂಸ್‌ನ ಸಂಪಾದಕ ಎಸ್.ಬಿ.ಬಸವರಾಜು ಅವರುಗಳು ಆಯ್ಕೆಯಾದರು.
ಪ್ರೆಸ್‌ಕ್ಲಬ್‌ನ ನೂತನ ಅಧ್ಯಕ್ಷ ಕೆ.ಟಿ.ಮೋಹನ್ ಕುಮಾರ್ ಮಾತನಾಡಿ ಕ್ಲಬ್‌ನ ಎಲ್ಲಾ ಸದಸ್ಯರುಗಳ ಸಹಕಾರ, ಮಾರ್ಗದರ್ಶನ ಮತ್ತು ವಿಶ್ವಾಸದೊಂದಿಗೆ ಹಾಗೂ ರಾಜ್ಯ ಸಮಿತಿಯ ಸಲಹೆ ಸೂಚನೆಗಳಂತೆ ಕಾರ್ಯ ನಿರ್ವಹಿಸಲಾಗುವುದು. ಸಾಮಾಜಿಕ ಸೇವಾ ಕಾರ್ಯ ಚಟುವಟಿಕೆಗಳನ್ನು ನಡೆಸಲಾಗುವುದು. ಇದಕ್ಕೆ ತಾಲ್ಲೂಕಿನ ಸರ್ವರ ಸಹಕಾರ ಅತ್ಯಗತ್ಯ ಎಂದರು.

ಈ ಸಂದರ್ಭದಲ್ಲಿ ಕ್ಲಬ್‌ನ ಎಲ್ಲಾ ಸದಸ್ಯರು ನೂತನ ಅಧ್ಯಕ್ಷರನ್ನು ಹಾಗೂ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!