Mysore
20
scattered clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಸರ್ಕಾರವೇ ಸ್ಯಾಂಟ್ರೊ ರವಿಯನ್ನು ರಕ್ಷಣೆ ಮಾಡುತ್ತಿದೆ :ಸಿದ್ದರಾಮಯ್ಯ

ಮೈಸೂರು : ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು  ಸ್ಯಾಂಟ್ರೊ ರವಿ ವಿಚಾರಕ್ಕೆ ಸಂಬಂಧಿಸಿದಂತೆ  ಸ್ಯಾಂಟ್ರೊ ರವಿಯನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ. ವಿಚಾರಣೆ ಮಾಡಿದರೆ ತಮ್ಮ ಬಣ್ಣ ಬಯಲಾಗುತ್ತೆ ಎಂದು ಸರ್ಕಾರ ಅವನನ್ನು ರಕ್ಷಣೆ ಮಾಡುತ್ತಿದೆ. ಸ್ಯಾಂಟ್ರೊ ರವಿ ಒಬ್ಬ ಕುಖ್ಯಾತ ಕ್ರಿಮಿನಲ್. ಆತ ಅತ್ಯಾಚಾರ ಪ್ರಕರಣದಲ್ಲಿದ್ದಾನೆ, ಪಿಂಪ್ ಆಗಿ ಕೆಲಸ ಮಾಡಿದ್ದಾನೆ, ವರ್ಗಾವಣೆ ದಂಧೆಯಲ್ಲಿದ್ದಾನೆ, ಫೋಕ್ಸೋ ಪ್ರಕರಣದಲ್ಲಿದ್ದಾನೆ. ಇಷ್ಟೆಲ್ಲಾ ಇದ್ದರೂ ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಯಾಕೆ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಕೇಸ್ ಸಿಐಡಿಗೆ ವರ್ಗಾವಣೆ ಆಗಿದ್ದರೆ ಆತನನ್ನು ವಿಚಾರಣೆಗೆ ವಿಳಂಬವಾಗಿ ಪಡೆದಿದ್ದು ಯಾಕೆ? ಸಿಐಡಿ ಅವರು ಯಾರ ಕೈಕೆಳಗೆ ಕೆಲಸ ಮಾಡೋದು? ಸಿಐಡಿ ಒಂದು ಸ್ವತಂತ್ರ ಇಲಾಖೆ ಅಲ್ಲ, ಪೊಲೀಸ್ ಇಲಾಖೆಯ ಇನ್ನೊಂದು ವಿಭಾಗ ಅಷ್ಟೆ. ಈ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರ ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!