Mysore
26
light rain

Social Media

ಭಾನುವಾರ, 03 ನವೆಂಬರ್ 2024
Light
Dark

10 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮುಂದಾದ Microsoft

ವಾಷಿಂಗ್ಟನ್​: ಆರ್ಥಿಕ ಹಿಂಜರಿತದಿಂದ ಅಮೆರಿಕದ ದೊಡ್ಡ ದೊಡ್ಡ ಟೆಕ್​ ಕಂಪನಿಗಳಲ್ಲಿ ಉದ್ಯೋಗಿಗಳ ವಜಾ ಪ್ರಕ್ರಿಯೆ ಮುಂದುವರೆದಿದ್ದು, ದಿನವೊಂದಕ್ಕೆ 1600 ಮಂದಿ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಪಟ್ಟಿಗೆ ಇದೀಗ ಮೈಕ್ರೋಸಾಫ್ಟ್​ ಕೂಡ ಸೇರಿಕೊಂಡಿದೆ. ಟೆಕ್​ ದೈತ್ಯ ಸಂಸ್ಥೆ​ಯು ತನ್ನ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು​ ವರದಿ ಮಾಡಿವೆ. ಮೈಕ್ರೋಸಾಫ್ಟ್​​ ತಮ್ಮ ಸಂಸ್ಥೆಯಲ್ಲಿ ಸರಿಸುಮಾರು ಶೇ 5ರಷ್ಟು ಅಥವಾ 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಿದೆ.ಸಂಸ್ಥೆಯ ಮಾನವ ಸಂಪನ್ಮೂಲ ಮತ್ತು ಇಂಜಿನಿಯರಿಂಗ್​ ವಿಭಾಗದಲ್ಲಿ ಬುಧವಾರ ಸಾವಿರಾರು ಜನರು ಕೆಲಸ ಕಳೆದುಕೊಳ್ಳಬಹುದು ಎಂದು ಹೇಳಲಾಗಿದೆ. ಅಮೆರಿಕದ ತಂತ್ರಜ್ಞಾನ ವಲಯದಲ್ಲಿ ನಡೆಯುತ್ತಿರುವ ಹೊಸ ಉದ್ಯೋಗ ವಜಾ ಪ್ರಕರಣವಿದು. ಈಗಾಗಲೇ ಅಮೆಜಾನ್​, ಮೆಟಾದಂತಹ ಸಂಸ್ಥೆಗಳು ಬೇಡಿಕೆ ಕುಗ್ಗುವಿಕೆ ಮತ್ತು ಜಾಗತಿಕ ಆರ್ಥಿಕತೆ ಕುಸಿತದಿಂದಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ಅನಿವಾರ್ಯವಾಗಿದೆ ಎಂದು ಪ್ರಕಟಿಸಿ, ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದವು.

ಮಾರುಕಟ್ಟೆ ಕುಸಿತ: ಜೂನ್​ 30ರ ವರದಿ ಅನುಸಾರ, ಮೈಕ್ರೋಸಾಫ್ಟ್​ ಸಂಸ್ಥೆಯಲ್ಲಿ 221,000 ಮಂದಿ ಪೂರ್ಣ ಪ್ರಮಾಣದ ಉದ್ಯೋಗಿಗಳಿದ್ದಾರೆ. ಇದರಲ್ಲಿ ಅಮೆರಿಕದಲ್ಲಿ 122,000 ಮಂದಿ ಕಾರ್ಯ ನಿರ್ವಹಿಸುತ್ತಿದ್ದರೆ, 99,000 ಮಂದಿ ಅಂತಾರಾಷ್ಟ್ರೀಯ ಮಟ್ಟದ ಉದ್ಯೋಗಿಗಳಾಗಿದ್ದಾರೆ. ಮೈಕ್ರೋಸಾಫ್ಟ್​​ ತಮ್ಮ ಕ್ಲೌಡ್​ ಯೂನಿಟ್​ ಅಜುರ್​ ಬೆಳವಣಿಗೆ ನಿರ್ವಹಣೆ ಒತ್ತಡದಲ್ಲಿ ಸಿಲುಕಿದೆ. ಅಲ್ಲದೇ, ಮಾರುಕಟ್ಟೆಯ ಕ್ವಾರ್ಟರ್​ನಲ್ಲಿ ಕುಸಿತದ ನಂತರ ವಿಂಡೋಸ್​ ಮತ್ತು ಸಾಧನಗಳ ಮಾರಾಟ ಇಳಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಅನಿವಾರ್ಯವಾಗಿದೆ ಎನ್ನಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ