Mysore
20
overcast clouds

Social Media

ಶನಿವಾರ, 28 ಫೆಬ್ರವರಿ 2026
Light
Dark

ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ಶ್ರುತಿ

ಮಂಗಳೂರು: ಚಂದನವನದ ಹಿರಿಯ ಕಲಾವಿದೆ ಶ್ರುತಿ ಅವರು ಮಂಗಳೂರಿನ ಕುತ್ತಾರು ಬಳಿ ಇರುವ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಕೋಲ ಸೇವೆ ಸಲ್ಲಿಸಿದ್ದಾರೆ.

https://www.instagram.com/reel/CnVuV-IDw9f/?utm_source=ig_web_button_share_sheet

ಮಗಳು ಗೌರಿ ಜತೆ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ಕೊಟ್ಟ ಶ್ರುತಿ ಅವರು ಇನ್ಸ್ಟಾಗ್ರಾಂನಲ್ಲಿ ತಾವು ಕಾರಣಿಕ ದೈವದ ದರ್ಶನ ಪಡೆದ ವಿಡಿಯೋ ಹಂಚಿಕೊಂಡಿದ್ದಾರೆ. ಸುಧೀರ್ ಅತ್ತಾವರ ನಿರ್ದೇಶನದ ʼಕರಿ ಹೈದ ಕರಿ ಅಜ್ಜʼ ಚಲನ ಚಿತ್ರದಲ್ಲಿ ನಟಿಸಿರುವ ಶ್ರುತಿ ಅವರು ನಿರ್ಮಾಪಕ ತ್ರಿವಿಕ್ರಮ್ ಸೇರಿದಂತೆ ಇಡೀ ಚಿತ್ರತಂಡದ ಜತೆ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ತಮ್ಮ ಇಷ್ಟಾರ್ಥವನ್ನು ಹಾರೈಸಿಕೊಂಡವರು ಹರಕೆ ಸೇವೆ ಸಲ್ಲಿಸುತ್ತಾರೆ. ಕೊರಗಜ್ಜನ ದರ್ಶನಕ್ಕೆ ಅವಕಾಶ ಮಾಡಿ ಕೊಟ್ಟ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!