Mysore
16
broken clouds

Social Media

ಮಂಗಳವಾರ, 06 ಜನವರಿ 2026
Light
Dark

ವಿದ್ಯಾರ್ಥಿಗಳು ವಿವೇಕಾನಂದರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಿ: ಶಿಕ್ಷಕ ರಮೇಶ್

ಹನೂರು: ಪ್ರತಿಯೊಬ್ಬರೂ ವಿವೇಕಾನಂದರ ತತ್ವಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಬೇಕು ಎಂದು ಶಿಕ್ಷಕ ರಮೇಶ್ ತಿಳಿಸಿದರು.

ತಾಲೂಕಿನ ರಾಮಾಪುರ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಸ್ವಾಮಿ ವಿವೇಕಾನಂದರು ಇಡೀ ಜಗತ್ತನ್ನೇ ದೇಶದತ್ತ ಸೆಳೆಯಲು ಕಾರಣರಾದ ಆಧ್ಯಾತ್ಮ ಚೇತನ. ಇವರು ಯುವಕರಲ್ಲಿ ದೇಶ ಪ್ರೇಮವನ್ನು ಮೂಢಿಸುವುದರ ಮೂಲಕ ಸದೃಢ ರಾಷ್ಟ ನಿರ್ಮಿಸಲು ಪಣತೊಟ್ಟ ಅಪ್ಪಟ ದೇಶಪ್ರೇಮಿ. ಜತೆಗೆ ಉತ್ತಮ ಸಮಾಜ ನಿರ್ಮಿಸಲು ಕನಸನ್ನು ಹೊತ್ತು ದೇಶದ ಜನರಿಗೆ ಕರೆ ನೀಡಿದ್ದ ಆಧ್ಯಾತ್ಮಕ ಚಿಂತಕ. ಇವರು ದೇಶದ ಸಂಸ್ಕøತಿಯನ್ನು ಉತ್ತುಂಗಕ್ಕೇರಿಸುವುದರ ಮೂಲಕ ಜನರಲ್ಲಿ ಭಾವಕ್ಯತೆಯ ಬೇರಿಗೆ ಭದ್ರ ಬುನಾದಿ ಹಾಕಿದವರು. ಇವರು ಚಿಕ್ಕ ವಯಸ್ಸಿನಲ್ಲಿಯೇ ದೇಶದಲ್ಲಿನ ಸವಾಲುಗಳನ್ನು ಎದುರಿಸಿ ಉತ್ತಮ ದೇಶ ನಿರ್ಮಾಣ ಮಾಡಲು ಪಣ ತೊಟ್ಟವರು. ಹಾಗಾಗಿ ದೇಶಕ್ಕೆ ತಮ್ಮದೇಯಾದ ಸೇವೆಯನು ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಜೆ.ಎಂ ರಾಣಿ, ಶಿಕ್ಷಕರಾದ ಏಜಾಜ್ ಅಹಮದ್, ದೇವರಾಜು, ಕೆಂಚಪ್ಪ, ರೂಪಶ್ರೀ, ಸಾವಿತ್ರಿ, ದೇವಾಂಗಿನಿ, ಸುನೀತ, ಕವಿತ, ರಾಜಮ್ಮ ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!