Mysore
26
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ಮೈಸೂರು ಮೂಲದ ಉದ್ಯಮಿ ಆದಿಲ್ ಜೊತೆ ರಾಕಿ ಸಾವಂತ್ ಮದುವೆ

ಮುಂಬೈ: ನಟಿ ರಾಖಿ ಸಾವಂತ್ ಆಕೆಯ ಗೆಳೆಯ, ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ದುರಾನಿ ಮದುವೆಯಾಗಿದ್ದಾರೆ. ಮದುವೆ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ರಾಖಿ ಗುಲಾಬಿ ಬಣ್ಣದ ಶರಾರ ಜೊತೆಗೆ ತನ್ನ ತಲೆಯ ಮೇಲೆ ದುಪ್ಪಟ್ಟವನ್ನು ಧರಿಸಿದ್ದರೆ, ಆದಿಲ್ ಕಪ್ಪು ಬಣ್ಣದ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ಪೋಟೋಗಳಲ್ಲಿ ಹೂ ಮಾಲೆ ಹಾಗೂ ಮದುವೆ ಧೃಡೀಕರಣ ಪತ್ರಕ್ಕೆ ಸಹಿ ಹಾಕಿರುವುದನ್ನು ಕಂಡು ಅಭಿಮಾನಿಗಳು ಶುಭಾಶಯಗಳನ್ನು ಕೋರುತ್ತಿದ್ದಾರೆ. ಆದರೆ ಇನ್ನೂ ಇವರಿಬ್ಬರೂ ತಮ್ಮ ಮದುವೆ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ.

‌‌ಕಳೆದ ವರ್ಷ ಮೇ ತಿಂಗಳಲ್ಲಿ ರಾಖಿ, ಆದಿಲ್ ಜೊತೆ ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಕಾರ್ಯಕ್ರಮವೊಂದರಲ್ಲಿ ಮಾಹಿತಿ ನೀಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!