Mysore
28
moderate rain

Social Media

ಬುಧವಾರ, 12 ಆಗಸ್ಟ್ 2026
Light
Dark

RRR ಚಿತ್ರದ ‘ನಾಟು ನಾಟು’ ಹಾಡಿಗೆ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ!

ಲಾಸ್‌ ಏಂಜಲೀಸ್‌(ಯುಎಸ್‌ಎ): ಭಾರತದ ಖ್ಯಾತ ಸಿನಿಮಾ ನಿರ್ದೇಶಕ ​ಎಸ್.​ಎಸ್.ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಚಿತ್ರದ ನಾಟು ನಾಟು ಹಾಡು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್​​ 2023ರ ಅತ್ಯುತ್ತಮ ಮೂಲ (ಸ್ವತಂತ್ರ ರಚನೆ) ಹಾಡು ಪ್ರಶಸ್ತಿ ಪಡೆದುಕೊಂಡಿದೆ. ಆರ್​ಆರ್​ಆರ್​ 2022ರ ದಕ್ಷಿಣ ಚಿತ್ರರಂಗದ ಸೂಪರ್​ ಹಿಟ್ ಸಿನಿಮಾ ಆಗಿತ್ತು. ಭಾರತ ಮಾತ್ರವಲ್ಲ, ವಿದೇಶದ ಥಿಯೇಟರ್​ಗಳಲ್ಲಿಯೂ ಧೂಳೆಬ್ಬಿಸಿತ್ತು.ದಕ್ಷಿಣ ಭಾರತದ ಸಿನಿಮೋದ್ಯಮದ ಜನಪ್ರಿಯ ತಾರೆಯರಾದ ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅತ್ಯದ್ಭುತ ಅಭಿನಯಕ್ಕೆ ಫ್ಯಾನ್ಸ್ ಫುಲ್ ಮಾರ್ಕ್ಸ್‌ ನೀಡಿದ್ದರು. 1,200 ಕೊಟಿ ರೂ.ಗೂ ಅಧಿಕ ಗಳಿಗೆ​ ಮಾಡಿರುವ ಈ ಸಿನಿಮಾ ಈಗಾಗಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಅಂತಾರಾಷ್ಟ್ರೀಯ ಗಾಲಾಗೆ ಸ್ಟೈಲಿಶ್​ ಎಂಟ್ರಿ: ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಬುಧವಾರ ವರ್ಣರಂಜಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ರಾಜಮೌಳಿ, ರಾಮ್​ಚರಣ್​​​ ಮತ್ತು ಜೂನಿಯರ್​ ಎನ್​ಟಿಆರ್​ ಸೇರಿದಂತೆ ಅವರ ಕುಟುಂಬಸ್ಥರು, ಚಿತ್ರತಂಡದ ಕೆಲವರು ಭಾಗಿಯಾಗಿದ್ದರು. ಚಿತ್ರದ ಮೂವರು ಪ್ರಮುಖರು ಅಂತಾರಾಷ್ಟ್ರೀಯ ಗಾಲಾಗೆ ಸ್ಟೈಲಿಶ್​ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಪ್ರಮುಖರ ಫೋಟೋಗಳೀಗ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿವೆ. ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!