Mysore
21
mist

Social Media

ಶುಕ್ರವಾರ, 02 ಜನವರಿ 2026
Light
Dark

ಗೋಣಿಕೊಪ್ಪದಲ್ಲಿ ಪೈಂಟ್ಸ್ ಅಂಗಡಿಗೆ ಬೆಂಕಿ

ಗೋಣಿಕೊಪ್ಪ: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಭೇರು ಪೈಂಟ್ಸ್ ಅಂಗಡಿಯಲ್ಲಿ  ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡು ಅಪಾರ ನಷ್ಟ ಸಂಭವಿಸಿದೆ.
ಇಡೀ ಕಟ್ಟಡ ಸಂಪೂರ್ಣವಾಗಿ ಬೆಂಕಿಯಿಂದ ಆವರಿಸಿಕೊಂಡು ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಯಾಗಿತ್ತು. ನಂತರ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಯಿತಾದರೂ ಬೆಂಕಿಯ ತೀವ್ರತೆಗೆ ಎರಡೂ ನೀರಿನ ಟ್ಯಾಂಕರ್ ಖಾಲಿಯಾಗಿ ಅಗ್ನಿ ಶಾಮಕ ದಳಕ್ಕೆ ನೀರು ತುಂಬಿಸಲೂ ವ್ಯವಸ್ಥೆಯೂ ಇಲ್ಲದೆ, ಗ್ರಾಮ ಪಂಚಾಯಿತಿಯ ಟ್ಯಾಂಕರ್‌ನಿಂದ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಈ ಘಟನೆಯಲ್ಲಿ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸೇರಿದಂತೆ ಎಲ್ಲರೂ ಸೇರಿ ಹರಸಾಹಸ ಪಟ್ಟು ಕೊನೆಗೂ ಬೆಂಕಿಯನ್ನು ನಂದಿಸುವಲ್ಲಿ  ಯಶಸ್ವಿಯಾದರು. ಅಗ್ನಿ ಆಕಸ್ಮಿಕಕ್ಕೆ ಕಾರಣ ಏನೆಂದು ತಿಳಿಯಲು ತನಿಖೆ ನಡೆಯುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!