Mysore
18
overcast clouds

Social Media

ಮಂಗಳವಾರ, 06 ಜನವರಿ 2026
Light
Dark

ರಾಜಕೀಯ ಪ್ರವೇಶಕ್ಕಾಗಿ ಪೊಲೀಸ್ ಇನ್ಸ್​ಪೆಕ್ಟರ್​ ಹುದ್ದೆಗೆ ರಾಜೀನಾಮೆ ನೀಡಿದ ಬಿ.ಪುಟ್ಟಸ್ವಾಮಿ

ಚಾಮರಾಜನಗರ: ರಾಜಕೀಯ ಪ್ರವೇಶಕ್ಕಾಗಿ ಬಿ.ಪುಟ್ಟಸ್ವಾಮಿ ಅವರು ಪೊಲೀಸ್ ಇನ್ಸ್​ಪೆಕ್ಟರ್​ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಆಂದೋಲನಕ್ಕೆ ತಿಳಿಸಿದ್ದಾರೆ. ಬಿ.ಪುಟ್ಟಸ್ವಾಮಿ ಅವರು ಪ್ರಸ್ತುತ ಮೈಸೂರಿನಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಪೊಲೀಸ್ ಕಾನ್ಸ್​ಟೇಬಲ್, ಪಿಎಸ್​ಐ, ಇನ್ಸ್​ಪೆಕ್ಟರ್ ಸತತ​ ಆಗಿ 27 ವರ್ಷ ಸೇವೆ ಸಲ್ಲಿಸಿರುವ ಇವರು ತಮ್ಮ ಕರ್ತವ್ಯದ ಅವಧಿ  13 ವರ್ಷ ಬಾಕಿ ಇರುವಾಗಲೇ ಸ್ವಯಂ ನಿವೃತ್ತಿ ಬಯಸಿ ರಾಜೀನಾಮೆ ಸಲ್ಲಿಸಿದ್ದಾರೆ. ಬಿ.ಪುಟ್ಟಸ್ವಾಮಿ ಚಾಮರಾಜನಗರ, ಕೊಳ್ಳೇಗಾಲ ಗ್ರಾಮಾಂತರ, ರಾಮಾಪುರ, ಕೆಆರ್​ಎಸ್​ ಠಾಣೆ, ಅಗರ-ಮಾಂಬಳ್ಳಿ, ಹುಣಸೂರು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಅಲ್ಲದೆ ಬಿ.ಪುಟ್ಟಸ್ವಾಮಿ ಅಭಿಮಾನಿ ಬಳಗ, ಸೇವಾ ಟ್ರಸ್ಟ್​ ಮೂಲಕ ಚಾಮರಾಜನಗರ, ಕೊಳ್ಳೆಗಾಲ, ಗುಂಡ್ಲುಪೇಟೆ ಸೇರಿದಂತೆ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಈ ಬಗ್ಗೆಆಂದೋಲನದೊಟ್ಟಿಗೆ ಮಾತನಾಡಿದ ಅವರು ಸದ್ಯಕ್ಕೆ ನಾನು ಯಾವ ಪಕ್ಷದ ಅಭ್ಯರ್ಥಿ ಎಂಬುದನ್ನು ಇನ್ನೂ ನಿರ್ಧಾರ ಮಾಡಿಕೊಂಡಿಲ್ಲ, ನನ್ನ ಬೆಂಬಲಿಗರು, ಸ್ನೇಹಿತರು, ಕುಟುಂಬಸ್ಥರ ಜೊತೆ  ಚರ್ಚಿಸಿ ತಿಂಗಳಾಂತ್ಯದಲ್ಲಿ ತಾವು ಬೆಂಬಲಿಸುವ ಪಕ್ಷವನ್ನು ತಿಳಿಸುವುದಾಗಿ ಮಾಹಿತಿ ನೀಡಿದ್ದಾರೆ.
ಮುಂದುವರಿದು ಕಷ್ಟದಲ್ಲಿರುವ ಕ್ಷೇತ್ರದ ಜನರಿಗೆ ನೆರವಾಗುವ ಮೂಲಕ ಬಡತನ, ಶಿಕ್ಷಣ ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳುಗೆ ನೆರವಾಗುದ ಉದ್ದೇಶದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!