ಹನೂರು : ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಹಾಗೂ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಆಗಮಿಸಿದ ಜನಸ್ತೋಮವನ್ನು ನೋಡಿ ಸ್ಥಳೀಯ ಶಾಸಕರಿಗೆ ಸೋಲಿನ ಭಯ ಕಾಣುತ್ತಿದೆ ಎಂದು ಬಿಜೆಪಿ ಮುಖಂಡ ನಿಶಾಂತ್ ವ್ಯಂಗ್ಯವಾಡಿದರು.
ಪಟ್ಟಣದ ನಿಶಾಂತ್ ರವರ ಮಹಾ ಮನೆಯಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು ನನ್ನ ಸ್ನೇಹಿತ ತನ್ನ ಖಾಸಗಿ ಜಮೀನಿನಲ್ಲಿ ನನ್ನ ಹಾಗೂ ಬಿಜೆಪಿ ಪಕ್ಷದ ಪೋಸ್ಟರ್ ಅಳವಡಿಸಿರುವುದಕ್ಕೆ ಕಾಂಗ್ರೆಸ್ ಶಾಸಕರು ಹಾಗೂ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿರುವುದು ಸರಿ ಇಲ್ಲ, ಇವರು ಶಾಸಕರಾಗಿ 12 ವರ್ಷಗಳಿಂದ ಮಾಡದೇ ಇರುವ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಸರ್ಕಾರ ಮೂರು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಿದೆ.ಇದಲ್ಲದೆ ಕೇವಲ ಒಂದು ವರ್ಷದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣನವರ ನೇತೃತ್ವದಲ್ಲಿ ಇಡೀ ಜಿಲ್ಲೆ ಸಮಗ್ರ ಅಭಿವೃದ್ಧಿ ಆಗುತ್ತಿರುವುದನ್ನು ನೋಡಿ ಶಾಸಕರಿಗೆ ಭಯ ಉಂಟಾಗಿದೆ. ಇದು ನಮಗೆ ಹಾಗೂ ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಸಂತೋಷವನ್ನುಂಟು ಮಾಡಿದೆ. ಅಂದರೆ ನಮ್ಮ ಬಿಜೆಪಿ ಸಂಘಟನೆ ಹಾಗೂ ಬಿಜೆಪಿ ಶಕ್ತಿ ಯಾವ ರೀತಿ ಇದೆ ಎಂಬುದನ್ನು ಇದರಲ್ಲಿ ತಿಳಿದುಕೊಳ್ಳಬೇಕು, ಎಂದು ತಿಳಿಸಿದರು.