Mysore
22
overcast clouds

Social Media

ಮಂಗಳವಾರ, 23 ಜೂನ್ 2026
Light
Dark

ಮತಾಂತರಕ್ಕೆ ಅನುಮತಿ: ಮ.ಪ್ರ. ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ

Conversion-Permission-M-PR-High Court

ಹೊಸದಿಲ್ಲಿ: ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ ಪ್ರಕಾರ ಮತಾಂತರದ ವೇಳೆ ಜಿಲ್ಲಾಧಿಕಾರಿ ಎದುರು ಘೋಷಣೆ ಮಾಡುವ ಅಗತ್ಯವನ್ನು ತಳ್ಳಿಹಾಕಿದ್ದ ಮಧ್ಯಪ್ರದೇಶ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

ಹೈಕೋರ್ಟ್ ತೀರ್ಪಿನ ವಿರುದ್ಧ ಮಧ್ಯಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಕುರಿತಂತೆ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಸಂಬಂಧಪಟ್ಟವರಿಗೆ ನೋಟಿಸ್ ನೀಡಿತು. ಈ ವೇಳೆ ಅದು, “ಎಲ್ಲ ಮತಾಂತರಗಳನ್ನು ಕಾನೂನುಬಾಹಿರವೆನ್ನಲಾಗದು” ಎಂದಿತು. ಮುಂದುವರೆದು, ವಿಶೇಷ ಅನುಮತಿ ಅರ್ಜಿ (ಎಸ್‌ಎಲ್‌ಪಿ) ಮತ್ತು ಮಧ್ಯಂತರ ಪರಿಹಾರ ಕೋರಿಕೆಗೆ ಸಂಬಂಧಿಸಿದಂತೆ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲು ತಿಳಿಸಿತು. ಫೆಬ್ರವರಿ 7ಕ್ಕೆ ಪ್ರತಿಕ್ರಿಯಿಸಲು ಸೂಚಿಸಿತು.

ಇಂದು ನಡೆದ ವಿಚಾರಣೆಯ ವೇಳೆ ರಾಜ್ಯ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ, “ಮದುವೆ ಅಥವಾ ಮತಾಂತರಕ್ಕೆ ಯಾವುದೇ ನಿಷೇಧವಿಲ್ಲ. ಜಿಲ್ಲಾಧಿಕಾರಿಗೆ (ಮತಾಂತರದ) ಮಾಹಿತಿ ನೀಡಬೇಷ್ಟೇ. ತಡೆಯಾಜ್ಞೆಯು ಇದನ್ನಷ್ಟೇ ಮಾಡಲಿದೆ” ಎಂದರು. ಇದಕ್ಕೆ ಉತ್ತರಿಸಿದ ಪೀಠ, ಇದನ್ನು ಪರಿಗಣಿಸಲು ಸಾಧ್ಯವಿಲ್ಲ ಮತ್ತು ರಾಜ್ಯ ಸರ್ಕಾರಕ್ಕೆ ಪ್ರತಿವಾದ ಮಂಡಿಸುವುದಿದ್ದರೆ ಅದನ್ನು ಮುಂದಿನ ವಿಚಾರಣೆಯ ದಿನಾಂಕದಂದು (ಫೆ. 7) ಪ್ರಸ್ತುತಪಡಿಸಬಹುದು” ಎಂದಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!