Mysore
23
scattered clouds

Social Media

ಸೋಮವಾರ, 12 ಜನವರಿ 2026
Light
Dark

ಸರ್ಕಾರದ ಅನುದಾನದಲ್ಲಿ ಶಿಕ್ಷಕರ ಕುಟುಂಬಸ್ಥರು ಪ್ರವಾಸ; ಸಾರ್ವಜನಿಕರ ಆಕ್ರೋಶ !

ಹನೂರು: ಸಮೀಪದ ಆರ್.ಎಸ್ ದೊಡ್ಡಿ ಬಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಮಾದರಿ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುವುದರ ಜೊತೆಗೆ ತಮ್ಮ ಕೆಲ ಕುಟುಂಬಸ್ಥರನ್ನು ಕರೆದೊಯ್ದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಶಾಲೆಯಲ್ಲಿ 9ನೇ ತರಗತಿಯ 47 ವಿದ್ಯಾರ್ಥಿಗಳನ್ನು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಡಿಕೇರಿ, ಬೇಲೂರು, ಹಳೆಬೀಡು ಸೇರಿದಂತೆ ಇನ್ನಿತರೆ ಪ್ರವಾಸಿ ತಾಣಗಳಿಗೆ 2 ದಿನಗಳ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಸ್ತುತ ಪ್ರವಾಸದಲ್ಲಿದ್ದಾರೆ. ಪ್ರವಾಸದಲ್ಲಿ ಪ್ರಾಂಶುಪಾಲ ಬಸವರಾಜು, ಕನ್ನಡ ಶಿಕ್ಷಕ ಕೃಷ್ಣಮೂರ್ತಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಪರಶಿವಮೂರ್ತಿ, ಕಂಪ್ಯೂಟರ್ ಶಿಕ್ಷಕ ವಿನಯ್, ಗಣಿತ ಶಿಕ್ಷಕಿ ನಾಗಪ್ರಿಯ, ಶಾಲೆಯ ಶ್ರುಷೂಶಕಿ ಪ್ರೇಜಿಲ್ಲ, ಡಿ ಗ್ರೂಪ್ ನೌಕರಿ ನಗರತ್ನಮ್ಮ, ಅಡುಗೆ ಸಿಬ್ಬಂದಿಗಲಾದ ಪುಟ್ಟರಾಜು, ಸುಂದ್ರಮ್ಮ ಹಾಗೂ ಭದ್ರತಾ ಸಿಬ್ಬಂದಿ ಶ್ರೀನಿವಾಸ್ ತೆರಳಿದ್ದಾರೆ.

ಈ ಪ್ರವಾಸಕ್ಕೆ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಅನುದಾನ ನೀಡಲಾಗುತ್ತದೆ. ಆದರೆ ಇಲ್ಲಿನ ಪ್ರಾಂಶುಪಾಲ ಬಸವರಾಜು, ಕನ್ನಡ ಶಿಕ್ಷಕ ಕೃಷ್ಣಮೂರ್ತಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಪರಶಿವಮೂರ್ತಿ ಎಂಬವರು ಮಕ್ಕಳ ಪ್ರವಾಸದ ಪ್ರಯೋಜನ ಪಡೆದುಕೊಂಡು ತಮ್ಮ ಕುಟುಂಬ ವರ್ಗ ಕೆಲ ಸದಸ್ಯರನ್ನು (ಹೆಂಡತಿ, ಮಗ) ಪ್ರವಾಸಕ್ಕೆ ಕರೆದೊಯ್ದಿದ್ದು, ಸರ್ಕಾರ ನಿಯಮವನ್ನು ಗಾಳಿಗೆ ತೂರಿದ್ದಾರೆ. ಇದರಿಂದ ಮಕ್ಕಳ ಪ್ರವಾಸದ ಅನುದಾನ ಇಲ್ಲಿನ ಶಿಕ್ಷಕರಿಗೆ ವರದಾನವಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ ? ಎಂಬುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

200 ರೂ ವಸೂಲಿ: ವಿದ್ಯಾರ್ಥಿಗಳ ಪ್ರವಾಸಕ್ಕೆ ಸರ್ಕಾರ ಅನುದಾನ ನೀಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಹಣ ನೀಡಬೇಕಿಲ್ಲ. ಆದರೆ ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಿಂದ ತಲಾ 200 ರೂ ವಸೂಲಿ ಮಾಡಲಾಗಿದ್ದು, ಹಣ ಗಳಿಸುವ ತಂತ್ರ ಅನುಸರಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಬಸವರಾಜ್ ವಿರುದ್ಧ ಪೋಷಕರ ಆಕ್ರೋಶ : ಕಳೆದ ತಿಂಗಳು ಮುರಾರ್ಜಿ ವಸತಿ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಹಿಂದಿ ಶಿಕ್ಷಕ ಬಸವರಾಜ್ ರವರು ಶಾಲೆಗೆ ಸರಿಯಾಗಿ ಬರುತ್ತಿಲ್ಲ, ಇವರ ಬದಲಾಗಿ ಬೇರೆ ಶಿಕ್ಷಕರನ್ನು ನೇಮಕ ಮಾಡುವಂತೆ ಪೋಷಕರ ಒತ್ತಾಯಿಸಿದ್ದರು. ತರಗತಿಗೆ ಸರಿಯಾಗಿ ಬಾರದ ಬಸವರಾಜ್ ರವರಿಗೆ ಪ್ರಭಾರ ಪ್ರಾಂಶುಪಾಲ ಹುದ್ದೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕ್ರಮ ಕೈಗೊಳ್ಳುವಂತೆ ಆಗ್ರಹ : ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ದಿನಗಳ ಪ್ರವಾಸಕ್ಕೆ ಕಳುಹಿಸಲಾಗಿದೆ ಆದರೆ ಸರ್ಕಾರದ ಹಣದಲ್ಲಿ ಶಿಕ್ಷಕರು ತಮ್ಮ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ನಿಯಮದಲ್ಲಿ ಶಿಕ್ಷಕರು ಮಾತ್ರ ಮಕ್ಕಳ ಹಿತದೃಷ್ಟಿಯಿಂದ ಪ್ರವಾಸಕ್ಕೆ ತರಬೇಕು ಆದರೆ ಕುಟುಂಬಸ್ಥರು ತೆರಳಿರುವುದು ನಿಯಮ ಬಾಹಿರ ಈ ಕುಟುಂಬ ಸಮೇತ ಹೋಗಿರುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಶಿಕ್ಷಕರು ತಮ್ಮ ಕುಟುಂಬಸ್ಥರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿರುವುದು ಗಮನಕ್ಕೆ ಬಂದಿರಲಿಲ್ಲ, ಇದೀಗ ಗಮನಕ್ಕೆ ಬಂದಿದ್ದು ಕುಟುಂಬಸ್ಥರನ್ನು ಕರೆದು ಕೊಂಡು ಹೋಗಿರುವ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಮಲ್ಲಿಕಾರ್ಜುನ್
ಉಪ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!