Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

SSLC ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ನೋಂದಣಿಗೆ ದಿನಾಂಕ ವಿಸ್ತರಣೆ

ಬೆಂಗಳೂರು: ಮುಂಬರುವ ಮಾರ್ಚ್​-ಎಪ್ರಿಲ್​ನಲ್ಲಿ ನಡೆಯಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ನೋಂದಣಿಯ ದಿನಾಂಕವನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ.

​ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ನೋಂದಣಿಗೆ ಸಂಬಂಧಿಸಿದಂತೆ ಉಲ್ಲೇಖಿತ-3ರ ಸುತ್ತೋಲೆಗಳನ್ವಯ ದಿನಾಂಕವನ್ನು ವಿಸ್ತರಿಸಲಾಗಿದ್ದರೂ ಸಹ, ದೂರವಾಣಿಯ ಮುಖಾಂತರ ಖುದ್ದಾಗಿ ಕೆಲವು ಅಭ್ಯರ್ಥಿಗಳು, ಪೋಷಕರು ಮತ್ತು ಮುಖ್ಯೋಪಾಧ್ಯಾಯರು ಪುನ: ಶಾಲಾ ದಿನಾಂಕವನ್ನು ವಿಸ್ತರಿಸಲು ಮಂಡಳಿಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಪರಿಶೀಲನೆ ನಡೆಸಿ ದಿನಾಂಕ ವಿಸ್ತರಣೆ ಮಾಡಲಾಗಿದ್ದು ಕೊನೆಯ ದಿನಾಂಕ 2023 ರ ಜನವರಿ 5 ಆಗಿದೆ ಎಂದು ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.ಅಂತಿಮ ದಿನಾಂಕದೊಳಗೆ ಎಲ್ಲಾ ಅರ್ಹ ಶಾಲಾ, ಖಾಸಗಿ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕವನ್ನು ಪಾವತಿ ಮಾಡುವಂತೆ ತಮ್ಮ ಜಿಲ್ಲಾ ಅಥವಾ ತಾಲೂಕು ವ್ಯಾಪ್ತಿಗೆ ಬರುವ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೂಚಿಸುವುದು. ಜಿಲ್ಲೆ ಅಥವಾ ತಾಲೂಕು ವ್ಯಾಪ್ತಿಯ ಸ್ಥಳೀಯ ದಿನಪತ್ರಿಕೆ ಮತ್ತು ಇತರ ಮಾಧ್ಯಮಗಳ ಮೂಲಕ ಈ ವಿಷಯದ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು, ಪೋಷಕರು ಮತ್ತು ವಿದ್ಯಾರ್ಥಿಗಳ ಗಮನಕ್ಕೆ ಬರುವಂತೆ ವ್ಯಾಪಕ ಪ್ರಚಾರವಾಗವಂತಹ ಅಗತ್ಯ ಕ್ರಮ ಕೈಗೊಳ್ಳುವುದು. ಅಲ್ಲದೇ ಮಾರ್ಚ್-2023ರ ತಿಂಗಳಲ್ಲಿ ಪರೀಕ್ಷೆಯು ಪ್ರಾರಂಭವಾಗುತ್ತಿದ್ದು, ಸಮಯದ ಕೊರತೆಯಿರುವ ಕಾರಣ ಪುನ: ನೋಂದಣಿ ಮತ್ತು ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ