ಮೈಸೂರು: ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ದಸರಾ ವಸ್ತು ಪ್ರದರ್ಶನವನ್ನು ಜ.೧ರವೆಗೆ ವಿಸ್ತರಿಸಲಾಗಿದೆ. ಸೆಪ್ಟಂಬರ್ ತಿಂಗಳ 25ರಿಂದ ಆರಂಭವಾಗಿದ್ದ ದಸರಾ ವಸ್ತು ಪ್ರದರ್ಶನವು ಡಿಸೆಂಬರ್ 24 ರಂದು ಅಂತಿಮವಾಗಬೇಕಾಗಿತ್ತು. ಆದರೆ,ಕ್ರಿಸ್ಮಸ್, ಹೊಸ ವರ್ಷಾಚರಣೆ ಪ್ರಯುಕ್ತ ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸುವ ಕಾರಣ ಎಂಟು ದಿನಗಳ ಕಾಲ ವಿಸ್ತರಿಸಲಾಗಿದೆ ಎಂದು ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ತಿಳಿಸಿದ್ದಾರೆ. ವಸ್ತು ಪ್ರದರ್ಶನ ಆರಂಭದಿಂದ ಈತನಕ ಹನ್ನೆರಡು ಲಕ್ಷದಷ್ಟು ಮಂದಿ ಭೇಟಿ ನೀಡಿ ವೀಕ್ಷಿಸಿದ್ದಾರೆ. ಈ ಬಾರಿ ಹಲವು ರೀತಿಯ ಮನರಂಜನಾ ಅಮ್ಯೂಸ್ ಮೆಂಟ್ ಆಟಿಕೆಗಳು ಇದ್ದ ಕಾರಣಕ್ಕಾಗಿ ಸಾಕಷ್ಟು ಜನರು ವೀಕ್ಷಣೆ ಮಾಡಿದ್ದಾರೆ ಎಂದು ಹೇಳಿದರು.





