Mysore
24
overcast clouds

Social Media

ಬುಧವಾರ, 12 ಆಗಸ್ಟ್ 2026
Light
Dark

ರಾಜ್ಯದಿಂದ 14 ಆನೆಗಳು ಮಧ್ಯಪ್ರದೇಶಕ್ಕೆ ಸ್ಥಳಾಂತರ

ಕೊಡಗು: ಸಾಕಾನೆಗಳ ನಿರ್ವಹಣೆ ಹಾಗೂ ಒತ್ತಡ ಕಡಿಮೆ ಮಾಡಲು ರಾಜ್ಯ ಸರಕಾರ ಮೂರು ಸಾಕಾನೆಗಳ ಶಿಬಿರದಿಂದ 14 ಸಾಕಾನೆಗಳನ್ನು ಮಧ್ಯಪ್ರದೇಶಕ್ಕೆ ಕಳುಹಿಸಲು ಹಸಿರು ನಿಶಾನೆ ತೋರಿದೆ. ರಾಜ್ಯದ ಶಿಬಿರಗಳಿಂದ ಸಾಕಾನೆಗಳನ್ನು ಸ್ಥಳಾಂತರಿಸುವುದಕ್ಕೆ ಮಾವುತರು, ಕಾವಾಡಿಗಳ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈಗಾಗಲೇ ಎರಡು ರಾಜ್ಯಗಳ (ಕರ್ನಾಟಕ ಹಾಗೂ ಮಧ್ಯಪ್ರದೇಶ) ಅಧಿಕಾರಿಗಳ ತಂಡ ಶಿವಮೊಗ್ಗದಲ್ಲಿರುವ ಸಕ್ಕರೆ ಬೈಲು, ಕೊಡಗಿನ_ದುಬಾರೆ, ಬಂಡೀಪುರ, ರಾಂಪುರ ಶಿಬಿರಗಳಿಗೆ ಭೇಟಿ ನೀಡಿ ಸಾಕಾನೆಗಳ ಗುರುತು ಪತ್ತೆ ಹಚ್ಚಿ ಆರೋಗ್ಯ ಪರಿಶೀಲಿಸಿದೆ.

ಕೊಡಗು ಜಿಲ್ಲೆಯಲ್ಲಿರುವ #ದುಬಾರೆ ಹಾಗೂ ಹಾರಂಗಿ ಸಾಕಾನೆ ಶಿಬಿರದಲ್ಲಿಒಟ್ಟು 32 ಆನೆಗಳಿವೆ. ಇದರಲ್ಲಿಐದು ಸಾಕಾನೆಗಳಾದ ಜನರಲ್‌ ತಿಮ್ಮಯ್ಯ (8), ಜನರಲ್‌ ಕಾರ್ಯಪ್ಪ (8), ವಲ್ಲಿ(ಗಂಡು) (40), ಲವ (21), ಮಾರುತಿ (ಗಂಡು)(20) ಸ್ಥಳಾಂತರಗೊಂಡರೆ ಶಿಬಿರದಲ್ಲಿಉಳಿಯುವ ಆನೆಗಳ ಸಂಖ್ಯೆ 27.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!