Mysore
21
overcast clouds

Social Media

ಶನಿವಾರ, 03 ಜನವರಿ 2026
Light
Dark

ಚಿರತೆ ದಾಳಿ; ರೈತನಿಗೆ ಗಾಯ

ತಿ.ನರಸೀಪುರ: ತಾಲ್ಲೂಕಿನ ಬನ್ನೂರು ಹೋಬಳಿ ವ್ಯಾಪ್ತಿಯ ಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಗೊರವನಹಳ್ಳಿ ಗ್ರಾಮ ಸಮೀಪದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನೊಬ್ಬನ ಮೇಲೆ ದಾಳಿ ಮಾಡಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಗ್ರಾಮದ ರೈತ ನಿಂಗೇಗೌಡ ಎಂಬವರು ಜಮೀನಿನಲ್ಲಿ ಕಬ್ಬಿನ ತರಗು ಸುಡುವ ಕೆಲಸ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಚಿರತೆ ದಾಳಿ ನಡೆಸಿದೆ. ತಕ್ಷಣ ಅವರು ತಮ್ಮ ಕೈುಂಲ್ಲಿದ್ದ ಕುಡಿಗೋಲಿನಿಂದ ಬಲವಾಗಿ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಚಿರತೆ ಅವರನ್ನು ಪರಚಿ ಪರಾರಿಯಾಗಿದೆ..

ನಿಂಗೇಗೌಡ ಅವರಿಗೆ ಗಾಯಗಳಾಗಿದೆ. ಆದರೆ  ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಗಾಯಾಳು ನಿಂಗೇಗೌಡರಿಗೆ ಬನ್ನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಾಹಿತಿ ದೊರತ ಕೂಡಲೇ ಕಾರ್ಯ ಪ್ರವೃತ್ತರಾದ ಡಿವೈಎಫ್‌ಆರ್‌ಒ ಉಮೇಶ್, ಅರಣ್ಯ ಸಂರಕ್ಷಣಾಧಿಕಾರಿ ನಂದಕುಮಾರ್, ಚಾಲಕ ಮಂಜು ಅವರು ಚಿರತೆಗಾಗಿ ತೀವ್ರ ಶೋಧ ನಡೆಸಿದ್ದಾರೆ. ಕಬ್ಬಿನ ಗದ್ದೆಗಳಿರುವುದರಿಂದ ಚಿರತೆ ಪರಾರಿಯಾಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರ: ಚಿರತೆ ದಾಳಿ;೨ ಮೇಕೆ ಸಾವು

ದೂರ : ಮೈಸೂರು ತಾಲ್ಲೂಕಿನ ದೂರ ಗ್ರಾಮದಲ್ಲಿ ಚಿರತೆಯೊಂದು ಎರಡು ಮೇಕೆಗಳನ್ನು ಕೊಂದುಹಾಕಿದ್ದು, ಗ್ರಾಮಸ್ಥರಲ್ಲಿ ಭೀತಿ ಎದುರಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!