Mysore
23
overcast clouds

Social Media

ಬುಧವಾರ, 14 ಜನವರಿ 2026
Light
Dark

ಬಿಕಾಂ ವಿದ್ಯಾರ್ಥಿನಿ ಸಾವಿಗೆ ಶರಣು

ಮೈಸೂರು :ನಗರದ ಪೊಲೀಸ್ ವಿಶೇಷ ವಿಭಾಗದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗೋಪಿನಾಥ್ ಅವರ ಮಗಳು ಗಿರಿಜಾಲಕ್ಷ್ಮಿ (19) ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದಾರೆ.
ಜಲಪುರಿ ಪೊಲೀಸ್ ವಸತಿಗೃಹದ ಸಿ.ಬ್ಲಾಕ್ ನಲ್ಲಿ ಗೋಪಿನಾಥ್ ನೆಲೆಸಿದ್ದು, ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊರಹೋಗಿದ್ದ ಮನೆಯವರು ಸಂಜೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಆಕೆಯನ್ನು ಸಮೀಪದ ಗೋಪಾಲಗೌಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದರೂ, ಅಷ್ಟರ ವೇಳೆಗೆ ಪ್ರಾಣ ಹೋಗಿತ್ತು.
ಗಿರಿಜಾಲಕ್ಷ್ಮಿ ನಗರದ ಟೆರೇಷಿಯನ್ ಕಾಲೇಜಿನಲ್ಲಿ ಪ್ರಥಮ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಗಿರಿಜಾ ಮೃತದೇಹ ಕೆ.ಆರ್.ಆಸ್ಪತ್ರೆಯಲ್ಲಿ ಇದ್ದು, ನಾಳೆ‌‌ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪ್ರಕರಣ ಕುರಿತು ನಜರ್ ಬಾದ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಐದು ದಿನಗಳ ಹಿಂದಷ್ಟೇ ಗೋಪಿನಾಥ್ ಅವರ ಅಣ್ಣ ವಿಧಿವಶರಾಗಿದ್ದರು. ಇದೀಗ ಈ ದುರಂತ ನಡೆದಿದೆ. ಆ ಕುಟುಂಬಕ್ಕೆ ಮೇಲಿಂದ ಮೇಲೆ ಅಘಾತವಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!