ಮೈಸೂರು: ಹಿರಿಯ ಪತ್ರಕರ್ತ ರಹಮತುಲ್ಲಾ ಖಾನ್ (ಇಂದು) ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರಿಗೆ
68 ವರ್ಷ ವಯಸ್ಸಾಗಿತ್ತು.
ಬನ್ನಿಮಂಟಪದ ಖಾಸಗಿ ಆಸ್ಪತ್ರೆಯಲ್ಲಿ ಖಾನ್ ಕೊನೆಯುಸಿರೆಳೆದಿದ್ದಾರೆ. ಇವರು ಮಿನೋ ನ್ಯೂಸ್ ಮತ್ತು ದೆಹಲಿ ಸಹಾರಾ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು.
ಪಾರ್ಥಿವ ಶರೀರವನ್ನು ಕೆಸರೆಯ ಹೈದರ್ ಅಲಿ ಪಾರ್ಕ್ ಬಳಿಯ ಅವರ ಸಂಬಂಧಿಕರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಮೃತರ ನಿಧನಕ್ಕೆ ಕುಟುಂಬಸ್ಥರು, ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. .





