Mysore
24
light rain

Social Media

ಗುರುವಾರ, 01 ಅಕ್ಟೋಬರ್ 2026
Light
Dark

ನಂಜನಗೂಡು : ನಂಜುಂಡೇಶ್ವರನ ಹುಂಡಿಯಲ್ಲಿ 2.40 ಕೋಟಿ ರೂ ಕಾಣಿಕೆ ಸಂಗ್ರಹ

ಮೈಸೂರು: ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 2.40 ಕೋಟಿ ರೂ. ಹಣ ಹಾಗೂ 194 ಗ್ರಾಂ 800 ಮಿಲಿ ಗ್ರಾಂ ಚಿನ್ನ, 5 ಕೆಜಿ 50 ಗ್ರಾಂ ಬೆಳ್ಳಿ, 31 ವಿದೇಶಿ ಕರೆನ್ಸಿ ನಂಜುಂಡೇಶ್ವರನಿಗೆ ಕಾಣಿಕೆಯಾಗಿ ಬಂದಿದೆ.

ದೇವಾಲಯದ ದಾಸೋಹ ಭವನದಲ್ಲಿ ನಡೆದ 26 ಹುಂಡಿಗಳ ಎಣಿಕೆ ಕಾರ್ಯದಲ್ಲಿ 2,40,96,139 ರೂ. ಹಣ, ಚಿನ್ನ, ಬೆಳ್ಳಿ ಸಂಗ್ರಹವಾಗಿದೆ. ಶ್ರೀ ನಂಜುಂಡೇಶ್ವರ ಸ್ವಾಮಿ ಚಿಕ್ಕ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿದ ಪರಿಣಾಮ ಈ ಬಾರಿ ಎರಡು ಕೋಟಿಗೂ ಹೆಚ್ಚು ಆದಾಯ ದಾಟಿದೆ. ಹುಂಡಿ ಎಣಿಕೆ ಕಾರ್ಯದಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ದೇವಾಲಯದ ಸಿಬ್ಬಂದಿ ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!