Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಕೆ.ಆರ್.ನಗರ : ಜಮೀನುಗಳಿಗೆ ಲಗ್ಗೆ ಇಟ್ಟ ಕಾಡಾನೆ

ಮೈಸೂರು : ಕೆ.ಆರ್.ನಗರ ಪಟ್ಟಣದ ಹೊರವಲಯದಲ್ಲಿ ಇಂದು ಬೆಳಿಗ್ಗೆ  ಎರಡು ಕಾಡಾನೆಗಳು  ಜಮೀನುಗಳಿಗೆ ಲಗ್ಗೆ ಇಟ್ಟಿವೆ. ಸಮೀಪದ ಅರಕೆರೆ ಮತ್ತು ಅರಕೆರೆ ಕೊಪ್ಪಲು ಗ್ರಾಮದ ಜೋಳದ ಹೊಲದಲ್ಲಿ ಆನೆಗಳು  ಪ್ರತ್ಯಕ್ಷವಾಗಿದ್ದು, ಜಮೀನಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು   ಓಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರ ಕಾರ್ಯಾಚರಣೆ  ನಡೆಸುತ್ತಿದ್ದಾರೆ.  ಸ್ಥಳಕ್ಕೆ ತಹಸೀಲ್ದಾರ್ ಎಸ್.ಸಂತೋಷ್, ಅರಣ್ಯಾಧಿಕಾರಿಗಳ ಬೇಟಿ, ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು,  ಕಾರ್ಯಾಚರಣೆ ಮುಗಿಯುವರಿಗೂ ಸಾರ್ವಜನಿಕರರು ಸಹಕರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿಕೊಂಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ