Mysore
24
broken clouds

Social Media

ಗುರುವಾರ, 15 ಜನವರಿ 2026
Light
Dark

ವಿಮಾನ ಪಯಣಿಗರ ರಕ್ಷಣೆ : ಅಣಕು ಪ್ರದರ್ಶನ

ಮೈಸೂರು: ವಿಮಾನಗಳು ವೈಮಾನಿಕ ಹಾರಾಟ ನಡೆಸುವಾಗ ತುರ್ತು ಭೂ ಸ್ಪರ್ಶಗೊಂಡು, ಆಗಬಹುದಾದ ಸಂಭವನೀಯ ಅವಘಡಗಳ ಬಗೆಗೆ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ರಕ್ಷಣೆಯ ಬಗ್ಗೆ ಅಣುಕು ಪ್ರದರ್ಶನ ನಡೆಸಲಾಯಿತು

ಅವಘಡಗಳು ನಡೆದಾಗ ರಕ್ಷಣಾ ಪಡೆಯ ಎಲ್ಲ ಸಿಬ್ಬಂದಿಗಳು ಒಗ್ಗೂಡಿ ಕಾರ್ಯ ನಿರ್ವಹಿಸಿ, ಪ್ರಯಾಣಿಕರ ಜೀವ ರಕ್ಷಣೆಗೆ ಮುಂದಾಗುವ ಸಿಬ್ಬಂದಿಗಳ ಕಾರ್ಯ ಕ್ಷಮತೆಗಾಗಿ, ನಡೆಸುವ ಅಣುಕು ಪ್ರದರ್ಶನವನ್ನು ಮಂಗಳವಾರ ವಿಮಾನ ನಿಲ್ದಾಣದ ಆವರಣದಲ್ಲಿ ವಿಮಾನ ನಿಲ್ದಾಣ ರಕ್ಷಣಾ ಪಡೆ, ಅಗ್ನಿಶಾಮಕ ತಂಡ, ಪೊಲೀಸ್ ರಕ್ಷಣಾ ತಂಡ, ವೈದ್ಯಕೀಯ ತಂಡ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಪ್ರದರ್ಶನದಲ್ಲಿ ಪಾಲ್ಗೊಂಡು, ಹಲವಾರು ಜೀವಗಳನ್ನು ರಕ್ಷಿಸುವ ಯಶಸ್ವಿ ಪ್ರದರ್ಶನ ನಡೆಸಲಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!